ಸ್ನಾತಕೋತ್ತರ ಕೇಂದ್ರಕ್ಕೆ ನ್ಯಾಕ್ ತಂಡ ಭೇಟಿ

23SND-02
Published on

ಸಿಂಧನೂರು: ನಗರದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಶುಕ್ರವಾರ ನ್ಯಾಕ್ ತಂಡ ಭೇಟಿ ನೀಡಿ ಪರಿಶೀಲಿಸಿತು.

ದೆಹಲಿ ವಿಶ್ವವಿದ್ಯಾಲಯದ ರಮೇಶ ಪ್ರಕಾಶ ಪಾಠಕ್, ಡೆಹ್ರಾಡೂನ್‌ನ ಅಭಯ ಆನಂದ ನೇತೃತ್ವದ ತಂಡ ಸ್ನಾತಕೋತ್ತರ ಕೇಂದ್ರದಲ್ಲಿ ವಿವಿಧ ವಿಭಾಗಗಳನ್ನು ಪರಿಶೀಲಿಸಿ ಮಾಹಿತಿ ಪಡೆಯಿತು. ಕೇಂದ್ರದಲ್ಲಿನ ಪರಿಸರ, ಮೂಲ ಸೌಕರ್ಯ ಹಾಗೂ ನುರಿತ ಉಪನ್ಯಾಸರು ಇರುವ ಬಗ್ಗೆ ತಂಡ ಮೆಚ್ಚುಗೆ ವ್ಯಕ್ತಪಡಿಸಿತು. ಸ್ನಾತಕೋತ್ತರ ಕೇಂದ್ರಕ್ಕೆ ರಸ್ತೆ ನಿರ್ಮಾಣ ಹಾಗೂ ವಿದ್ಯಾರ್ಥಿನಿಯರ ದಾಖಲಾತಿ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net