

ಹೊಸಪೇಟೆ: ಯುದ್ಧ ಪೀಡಿತ ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದ ಯುವಕನೊಬ್ಬನನ್ನು ಪಟ್ಟಣ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ನಗರದ ಸಿದ್ಧಲಿಂಗಪ್ಪ ಚೌಕಿ ನಿವಾಸಿ ಹಾಗೂ ಇಲ್ಲಿನ ಮೈನಾರಿಟಿ ಕಚೇರಿಯ ಅಟೆಂಡರ್ ಆಲಂ ಭಾಷಾ(೨೦) ಎಂಬಾತನನ್ನು ಬಂಧಿಸಲಾಗಿದೆ.
ಮತೀಯ ಭಾವನೆಗೆ ಸಂಬAಧಿಸಿ ಫ್ಯಾಲೆಸ್ತೀನ್ ಮತ್ತು ಇಸ್ರೇಲ್ ಮಧ್ಯೆ ಯುದ್ಧ ನಡೆಯುತ್ತಿದೆ. ಮುಸ್ಲಿಂ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಇಲ್ಲಿನ ಎಸ್.ಆರ್. ನಗರ, ಆಜಾದ್ ನಗರ, ಸಿದ್ದಲಿಂಗಪ್ಪ ಚೌಕಿಗಳ ಪ್ರದೇಶದ ಜನರ ವಾಟ್ಸಪ್‌ಗಳಲ್ಲಿ ರಾಜ ದ್ರೋಹವೆಸಗುವ ವಿಡಿಯೋಗಳು ಹರಿದಾಡುತ್ತಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು.
ಈ ಬಗ್ಗೆ ನಿಗಾ ವಹಿಸಿದ್ದ ಪೊಲೀಸರಿಗೆ ಆಲಂ ಭಾಷಾ ತನ್ನ ವಾಟ್ಸಪ್ ಸ್ಟೇಟಸ್‌ನಲ್ಲಿ ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸುವಂತಹ ಆಕ್ಷೇಪಾರ್ಹ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ, ಆರೋಪಿಯನ್ನು ಬಧಿಸಲಾಗಿದೆ.
ಈ ಕುರಿತು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.