ತುಳು ಭಾಷೆಯ ಮಾನ್ಯತೆಗಾಗಿ ಪ್ರಧಾನಿ ಕಚೇರಿಗೆ ಲಕ್ಷ ಪೋಸ್ಟ್ ಕಾರ್ಡ್ ಕಳುಹಿಸುವ ಅಭಿಯಾನ

20220829_114651
Published on

ಮಂಗಳೂರು: ತುಳುವೆರ್ ಕುಡ್ಲ ಸಂಘಟನೆ, ತುಳುನಾಡು ವಾರ್ತೆ ವಾರಪತ್ರಿಕೆ ಮತ್ತು ನಮ್ಮ ಟಿ.ವಿ ಸಂಯುಕ್ತ ಆಶ್ರಯದಲ್ಲಿ ‘ನಮ್ಮ ಪ್ರಧಾನಿಗ್ ತುಳುವೆರೆ ಪೋಸ್ಟ್ ಕಾರ್ಡ್’ ಎಂಬ ಅಭಿಯಾನ ಸೆ.1ರಂದು ಬೆಳಗ್ಗೆ 10.30 ಗಂಟೆಗೆ ದ.ಕ ಜಿಲ್ಲೆಯ ಕಡೆಯ ಗ್ರಾಮ ಬಂಜಾರು ಮಲೆಯಿಂದ ಆರಂಭಗೊಳ್ಳಲಿದೆ.
ಹಲವು ವರ್ಷಗಳಿಂದ ತುಳು ಭಾಷೆಗೆ ಮಾನ್ಯತೆ ಸಿಗದಿರುವ ಕಾರಣ ಅನೇಕ ಸಂಘ ಸಂಸ್ಥೆಗಳು ತಮ್ಮ ಧ್ವನಿ ಎತ್ತಿದರೂ ಈವರೆಗೆ ಯಾವುದೇ ಫಲ ಲಭಿಸಿಲ್ಲ. ಆದ್ದರಿಂದ ನರೇಂದ್ರ ಮೋದಿಯವರಿಗೆ ತುಳುವರಿಂದ ಪೋಸ್ಟ್ ಕಾರ್ಡ್ ಬರೆಯವ ಮೂಲಕ ತುಳುಬಾಷೆಗೆ ಅಧಿಕೃತ ಮಾನ್ಯತೆ ಒದಗಿಸಲು ಆಗ್ರಹಿಸಿ ಈ ವಿಭಿನ್ನ ರೀತಿಯಲ್ಲಿ ಅಭಿಯಾನ ಆಯೋಜಿಸಲಾಗಿದೆ ಎಂದು ಸಂಘಟಕ ನವೀನ್ ಶೆಟ್ಟಿ ಎಡ್ಮೆಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಭಿಯಾನದ ಮೂಲಕ 1ಲಕ್ಷಕ್ಕೂ ಅಧಿಕ ಪೋಸ್ಟ್ ಕಾರ್ಡ್‌ನ್ನು ಅಂಚೆಯ ಮೂಲಕ ಪ್ರಧಾನಿಯವರಿಗೆ ಕಳುಹಿಸುವ ಗುರಿ ಹೊಂದಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ/ ವೈಯಕ್ತಿಕ ಉದ್ದೇಶವಿಲ್ಲ. ಅಭಿಯಾನಕ್ಕೆ ಚಾಲನೆ ಸಿಕ್ಕ ಬಳಿಕ ಎಲ್ಲ ತುಳುಪರ ಸಂಘಟನೆಗಳು, ರಾಜಕೀಯ ಪಕ್ಷ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಇತರ ಎಲ್ಲ ಸಂಘ ಸಂಸ್ಥೆಗಳು ಅಭಿಯಾನದಲ್ಲಿ ಕೈಜೋಡಿಸುವಂತೆ ತುಳುವೆರ್ ಕುಡ್ಲದ ಅಧ್ಯಕ್ಷ ಪ್ರತೀಕ್ ಪೂಜಾರಿ ಮನವಿ ಮಾಡಿದರು.
ತುಳುವೆರ್ ಕುಡ್ಲ ಮಹಿಳಾ ವಿಭಾಗದ ಅಧ್ಯಕ್ಷೆ ಪೂಜಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯರಾಂ, ತುಳುನಾಡ ವಾರ್ತೆ ಸಂಪಾದಕ ಪುನೀತ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net