

ಬೆಂಗಳೂರು: ಜಯನಗರ ಪ್ರಧಾನ ಅಂಚೆ ಕಚೇರಿ ವ್ಯಾಪ್ತಿಯ ಅಂಚೆ ಕಚೇರಿಗಳ ಹಿರಿಯ ಅಧೀಕ್ಷಕರ ಕಚೇರಿಯಲ್ಲಿ ಸೆ.9 ರಂದು ಬೆಳಿಗ್ಗೆ 11.00 ಗಂಟೆಗೆ ‘ಅಂಚೆ ಅದಾಲತ್’ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು ದಕ್ಷಿಣ ವಿಭಾಗದ ಅಂಚೆ ಸೇವೆಗಳಿಗೆ ಸಂಬಂಧಿಸಿದ ಕುಂದು-ಕೊರತೆಗಳು ಅಥವಾ ದೂರುಗಳು, ಅಂದರೆ ಮೇಲ್ಗಳ ವಿತರಣೆ, ಸ್ಪೀಡ್ ಪೋಸ್ಟ್, ಲೇಖನಗಳು, ಪಾರ್ಸೆಲ್ಗಳು, ಮನಿ ಆರ್ಡರ್, ಉಳಿತಾಯ ಬ್ಯಾಂಕ್, ನಗದು ಪ್ರಮಾಣಪತ್ರಗಳು ಮತ್ತು ಕೌಂಟರ್ ಸೇವೆಗಳ ಕುರಿತು ಸಮಸ್ಯೆಗಳಿದ್ದರೆ, ಆ ಸಮಸ್ಯೆಗಳ ಪರಿಹಾರಕ್ಕಾಗಿ ಸೆ.5ರ ಸಂಜೆ 4 ಗಂಟೆ ಒಳಗಾಗಿ ಬೆಂಗಳೂರು ದಕ್ಷಿಣ ವಿಭಾಗದ ಅಂಚೆ ಕಚೇರಿಗಳ ಹಿರಿಯ ಅಧೀಕ್ಷಕರು, 11ನೇ ಮುಖ್ಯರಸ್ತೆ, 4ನೇ ಟಿ ಬ್ಲಾಕ್, 2ನೇ ಮಹಡಿ, ಜಯನಗರ ಪ್ರಧಾನ ಅಂಚೆ ಕಚೇರಿ, ಬೆಂಗಳೂರು - 560041 ಇವರಿಗೆ ಕಳುಹಿಸಬಹುದು ಎಂದು ಅಂಚೆ ಇಲಾಖೆ ತಿಳಿಸಿದೆ.