ಸಂಭವನೀಯ ಪ್ರವಾಹ ಪರಿಸ್ಥಿತಿ ವೀಕ್ಷಣೆ

26-KGL-2,,,,
ಕೊಳ್ಳೇಗಾಲ ದಾಸನಪುರದ ಬಳಿ ಕಾವೇರಿ ನದಿ ನೀರಿನ ಮಟ್ಟ ವೀಕ್ಷಿಸಿದರು.
Published on

ಕೊಳ್ಳೇಗಾಲ: ತಾಲೂಕಿನ ನದಿ ಪಾತ್ರ ಗ್ರಾಮಗಳಿಗೆ ಗುರುವಾರ ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್ ಭೇಟಿ ನೀಡಿ ಸಂಭವನೀಯ ಪ್ರವಾಹ ಪರಿಸ್ಥಿತಿ ವೀಕ್ಷಿಸಿದರು.

ಕಾವೇರಿ ಕಣಿವೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯ ಭರ್ತಿಯಾಗಿದ್ದು, ಕಾವೇರಿ ನದಿಗೆ 2 ಡ್ಯಾಂಗಳಿಂದ 75 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹೀಗಾಗಿ ಎಸಿ ಬಿ.ಆರ್.ಮಹೇಶ್ ನದಿ ಪಾತ್ರದ ಗ್ರಾಮಗಳಾದ ಮುಳ್ಳೂರು, ದಾಸನಪುರ ಇತರೆಡೆ ಖುದ್ದು ಭೇಟಿ ನೀಡಿ, ನದಿಯ ನೀರಿನ ಪ್ರಮಾಣ ವೀಕ್ಷಿಸಿದರು.

ಬಿ.ಆರ್.ಮಹೇಶ್ ಮಾತನಾಡಿ, ಜಲಾಶಯಗಳಿಂದ ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡಲಾಗಿದೆ. ಇದರಿಂದ ನದಿಯು ಮೈದುಂಬಿ ಹರಿಯುತ್ತಿದೆ. ನದಿ ಕಡೆಗೆ ಜನರು ತೆರಳದಂತೆ ಕ್ರಮ ವಹಿಸಬೇಕಿದೆ. ಹಾಗಾಗಿ ಪೊಲೀಸ್ ಇಲಾಖೆಯಿಂದ ನದಿಯತ್ತ ಜನರು ತೆರಳದಂತೆ ಬ್ಯಾರಿಗೇಡ್ ಅಳವಡಿಸಬೇಕು. ಅಂತೆಯೇ ಗ್ರಾ.ಪಂ. ಮಟ್ಟದಲ್ಲಿ ಜಾಗೃತಿಗಾಗಿ ಮೂಡಿಸಲು ಸೂಚಿಸಲಾಗಿದೆ. ಪ್ರವಾಹ ಮುನ್ನೇಚರಿಕೆ ಕ್ರಮ ಪ್ರತಿಯೊಬ್ಬರೂ ಪಾಲಿಸಬೇಕು. ತಾಲೂಕು ಆಡಳಿತದೊಂದಿಗೆ ಸಹಕರಿಸಬೇಕು ಎಂದರು.

ತಾಲೂಕು ಆಡಳಿತದಿಂದ ಸೂಚನೆ: ಕಾವೇರಿ ನದಿಗೆ ಡ್ಯಾಂಗಳಿಂದ ನೀರು ಬಿಡುತ್ತಿರುವ ಬಗ್ಗೆ ಹಾಗೂ ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ನದಿಗೆ ಜಾನುವಾರು, ಬಟ್ಟೆ ತೊಳೆಯಲು, ಸ್ನಾನ ಮಾಡಲು ಜನರು ಇಳಿಯದಂತೆ ಗ್ರಾ.ಪಂ ಅಧಿಕಾರಿಗಳು ಗ್ರಾಮದಲ್ಲಿ ಜಾಗೃತಿ ಮೂಡಿಸಬೇಕು ಎಂದು ತಾಲೂಕು ಆಡಳಿತ ಸೂಚನೆ ನೀಡಲಾಗಿದೆ ಅಲ್ಲದೆ ನದಿಗೆ ತೆರಳುವ ಜಾಗದಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಲು ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net