ಮೇಲ್ವಿಚಾರಕರಿಗೆ ಸಿಐಡಿ ಅಧಿಕಾರಿಗಳಿಂದ ಗಾಳ: ಡಿವೈಎಸ್​ಪಿ, ಇನ್​ಸ್ಪೆಕ್ಟರ್​ಗಳ ವಿಚಾರಣೆ ಸಾಧ್ಯತೆ

PSI
Published on

ಬೆಂಗಳೂರು: ಸಬ್​ ಇನ್​ಸ್ಪೆಕ್ಟರ್​ ನೇಮಕಾತಿಯಲ್ಲಿ ಅಕ್ರಮ ಎಸಗಿದ ಪೊಲೀಸ್​ ಅಧಿಕಾರಿಗಳು ಕಂಬಿ ಎಣಿಸುವ ಸರದಿ ಪ್ರಕ್ರಿಯೆ ಶುರುವಾಗಿದೆ. ಲಂಚ ಕೊಟ್ಟು ಅಡ್ಡದಾರಿಯಲ್ಲಿ ಹುದ್ದೆ ಗಿಟ್ಟಿಸಿಕೊಂಡಿದ್ದ ಅಭ್ಯರ್ಥಿಗಳು ಒಬ್ಬೊಬ್ಬರಾಗಿ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಖಾಕಿ ಧರಿಸಿಯೇ ಅಕ್ರಮಕ್ಕೆ ಸಾಥ್​ ನೀಡಿದ್ದ ಡಿವೈಎಸ್​ಪಿ, ಇನ್​ಸ್ಪೆಕ್ಟರ್​ರನ್ನು ಬಂಧಿಸಿದ ಬಳಿಕ ಸಿಐಡಿ ಅಧಿಕಾರಿಗಳೀಗ ಪರೀಾ ಕೊಠಡಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಿದ್ದ ಎಲ್ಲ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇರುವುದಾಗಿ ತಿಳಿದು ಬಂದಿದೆ.

2021ರ ಅ.3ರಂದು ರಾಜ್ಯದ 92 ಪರೀಕ್ಷಾ ಕೇಂದ್ರಗಳಲ್ಲಿ 54,104 ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಬರೆದಿದ್ದರು. ಇದರಲ್ಲಿ ಬೆಂಗಳೂರಿನ ಏಳು ಪರೀಾ ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದಾಗಿ ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಆಯ್ಕೆಯಾಗಿದ್ದ 22 ಅಭ್ಯರ್ಥಿಗಳ ವಿರುದ್ಧ ಎ್​ಐಆರ್​ ದಾಖಲಿಸಿ ಹಲವರನ್ನು ಬಂಧಿಸಿದ್ದಾರೆ. ಈ ಏಳು ಎಕ್ಸಾಂ ಸೆಂಟರ್​ಗಳ ಮೇಲ್ವಿಚಾರಕರಾಗಿದ್ದ ಡಿವೈಎಸ್​ಪಿ, ಇನ್​ಸ್ಪೆಕ್ಟರ್​ ಮತ್ತು ಶಿಕ್ಷಕರು, ಪ್ರಾಂಶುಪಾಲರನ್ನು ಸಿಐಡಿ ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ಈಗಾಗಲೇ ನೇಮಕಾತಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಡಿಜಿಪಿ, ಡಿವೈಎಸ್​ಪಿಯನ್ನು ಎತ್ತಂಗಡಿ ಮಾಡಲಾಗಿದೆ. ಜತೆಗೆ ಎಲ್ಲ ಸಿಬ್ಬಂದಿಯನ್ನು ಬೇರೆಡೆ ವರ್ಗಾವಣೆ ಮಾಡಿ ಹೊಸ ಅಧಿಕಾರಿ, ಸಿಬ್ಬಂದಿ ನೇಮಿಸಲು ಇಲಾಖೆ ನಿರ್ಧರಿಸಿದೆ.

ಪರೀಕ್ಷೆಗಾಗಿ ಶಾಲಾ-ಕಾಲೇಜುಗಳನ್ನು ಪರೀಕ್ಷಾ ಕೇಂದ್ರವಾಗಿ ಗುರುತಿಸಿ ಪ್ರಾಂಶುಪಾಲರನ್ನು ಕೇಂದ್ರದ ಮುಖ್ಯಸ್ಥರಾಗಿ ಮಾಡಲಾಗುತ್ತದೆ. ಪ್ರತಿ ಕೊಠಡಿಗೆ ಪರಿವೀಕ್ಷಕರಾಗಿ ಶಿಕ್ಷಕರನ್ನು ನೇಮಿಸಲಾಗಿರುತ್ತದೆ. ಇವರಿಗೆ ಕೇವಲ ಪ್ರಶ್ನೆಪತ್ರಿಕೆ ಕೊಡುವುದು, ಉತ್ತರಪತ್ರಿಕೆ ಸ್ವೀಕರಿಸುವ ಅಧಿಕಾರ ಮಾತ್ರ ಇರುತ್ತದೆ. ಇವರಿಗಿಂತ ಮೇಲಿನ ಹಂತದಲ್ಲಿ 500 ಅಭ್ಯರ್ಥಿಗಳಿಗೆ ಒಬ್ಬ ಇನ್​ಸ್ಪೆಕ್ಟರ್​, ಒಂದು ಕೇಂದ್ರಕ್ಕೆ ಒಬ್ಬ ಡಿವೈಎಸ್​ಪಿ ನೇಮಿಸಲಾಗಿರುತ್ತದೆ. ಪರೀೆ ಮುಗಿದ ಮೇಲೆ ಒಎಂಆರ್​ ಶೀಟ್​ಗಳನ್ನು ಸಿಐಡಿ ಪ್ರಧಾನ ಕಚೇರಿಗೆ ಮತ್ತು ಖಜಾನೆಗೆ ತಲುಪಿಸುವ ಜವಾಬ್ದಾರಿ ಇದೇ ಪೊಲೀಸ್​ ಅಧಿಕಾರಿಗಳದ್ದಾಗಿರುತ್ತದೆ. ಈ ಹಂತದಲ್ಲಿ ಅಕ್ರಮ ನಡೆದಿದ್ದರೆ ಕರ್ತವ್ಯನಿರತ ಅಧಿಕಾರಿಗಳೇ ಜವಾಬ್ದಾರಿಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಅಕ್ರಮ ನಡೆದಿರುವ 7 ಸೆಂಟರ್​ಗಳಲ್ಲಿ ಮೇಲ್ವಿಚಾರಕ ಡಿವೈಎಸ್​ಪಿ, ಇನ್​ಸ್ಪೆಕ್ಟರ್​, ಎಸ್​ಐ ಮತ್ತು ಸಿಬ್ಬಂದಿ ವಿಚಾರಣೆ ನಡೆಸಲು ಸಿಐಡಿ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಕಲಬುರಗಿ ಎರಡು ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದ ಇಬ್ಬರು ಡಿವೈಎಸ್​ಪಿ, ಇಬ್ಬರು ಇನ್​ಸ್ಪೆಕ್ಟರ್​, ಶಿಕ್ಷಕರು, ಪ್ರಾಂಶುಪಾಲರು ಸಿಐಡಿ ಸುಳಿಯಲ್ಲಿ ಸಿಲುಕಿದ್ದಾರೆ. ಮುಂದಿನ ಸರದಿ ಬೆಂಗಳೂರು ನಗರದ ಪರೀಾ ಕೇಂದ್ರಗಳದ್ದಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಭ್ರಷ್ಟಾಚಾರ, ಇಡಿ, ಐಟಿ ಕಂಟಕ: ಅಕ್ರಮ ನೇಮಕಾತಿಯಲ್ಲಿ ಪೊಲೀಸರು, ಅಭ್ಯರ್ಥಿಗಳು, ಶಿಕ್ಷಕರು ಮತ್ತು ಏಜೆಂಟ್​ಗಳು ಸೇರಿ 47 ಮಂದಿ ಬಂಧನಕ್ಕೆ ಒಳಗಾಗಿದ್ದಾರೆ. ಇದರಲ್ಲಿ ಸೇವಾನಿರತರಾಗಿದ್ದ 9ಕ್ಕೂ ಅಧಿಕ ಕಾನ್​ಸ್ಟೆಬಲ್​ಗಳು, ಒಬ್ಬ ಡಿವೈಎಸ್​ಪಿ, ಇನ್​ಸ್ಪೆಕ್ಟರ್​ ಬಂಧನಕ್ಕೆ ಒಳಗಾಗಿದ್ದಾರೆ. ಈ ಎಲ್ಲರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸಹ ಎ್​ಐಆರ್​ ದಾಖಲಿಸುವ ಸಾಧ್ಯತೆಗಳಿವೆ. ಇದಲ್ಲದೆ, 10 ಲಕ್ಷಕ್ಕೂ ಅಧಿಕ ಹಣಕಾಸಿನ ವ್ಯವಹಾರ ನಡೆಸಿದ್ದರೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಕ್ಕೂ ಇವರ ವಿರುದ್ಧ ದೂರು ಕೊಡಬಹುದಾಗಿದೆ. ಇದಷ್ಟೇ ಅಲ್ಲದೆ, ಮನಿ ಲಾಂಡರಿಂಗ್​ ಮತ್ತು ತೆರಿಗೆ ವಂಚನೆ ಆರೋಪಕ್ಕೆ ಗುರಿಯಾಗಲಿದ್ದಾರೆ.

ಐಪಿಎಸ್​ ಅಧಿಕಾರಿಯಾಗಿದ್ದರೆ?

ನೇಮಕಾತಿ ಅಕ್ರಮದಲ್ಲಿ ಐಪಿಎಸ್​ ಅಧಿಕಾರಿ ಬಂಧನಕ್ಕೆ ಒಳಗಾದರೆ ಸಿಬಿಐ ತನಿಖೆ ಕೈಗೊಳ್ಳಲಿದೆ. ಐಪಿಎಸ್​ ಅಧಿಕಾರಿಗಳು ಅಖಿಲ ಭಾರತ ನಾಗರಿಕ ಸೇವಾ ಹುದ್ದೆಯವರಾದ್ದರಿಂದ ಸಿಬಿಐ ಎಂಟ್ರಿ ಕೊಡಲಿದೆ. ನೇಮಕಾತಿ ಅಕ್ರಮ ಎಲ್ಲಿಗೆ ಮುಟ್ಟಲಿದೆ ಎಂಬುದು ಕಾದುನೋಡಬೇಕಿದೆ.

ಕೊಕಾ ಕಾಯ್ದೆ ಜಾರಿ? ಬಂಧಿತರ ವಿರುದ್ಧ ಕೊಕಾ ಕಾಯ್ದೆ ಜಾರಿಗೆ ಗೃಹ ಇಲಾಖೆ ಚಿಂತನೆ ಆರಂಭಿಸಿದೆ. ಈ ಹಿಂದೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ಕುಖ್ಯಾತ ಶಿವಕುಮಾರಯ್ಯ ಅಲಿಯಾಸ್​ ಗುರೂಜಿ(67) ಮತ್ತು ಆತನ ಗ್ಯಾಂಗ್​ ವಿರುದ್ಧ 2016ರಲ್ಲಿ ಕೊಕಾ ಕಾಯ್ದೆ ಜಾರಿ ಮಾಡಲಾಗಿತ್ತು. ಕೊಕಾ ಕಾಯ್ದೆ ಜಾರಿ ಮಾಡಿದರೆ 1 ವರ್ಷಗಳ ಕಾಲ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶ ಸಿಗುವುದಿಲ್ಲ. ಜತೆಗೆ ಬಂಧಿತರ ವಿಚಾರಣೆಗೆ ಪೊಲೀಸ್​ ಕಸ್ಟಡಿಗೆ ಹೆಚ್ಚಿನ ದಿವಸ ಸಿಗಲಿದೆ.

ಹಗರಣದ ಆರೋಪಿ ದಿವ್ಯಾ ಹಾಗರಗಿ ಅವರ ಕಾರು 2 ದಿನ ಗುಡ್ಡೇಕೊಪ್ಪ (ಗೃಹ ಸಚಿವರ ನಿವಾಸವಿರುವ ಗ್ರಾಮ)ದಲ್ಲಿತ್ತು. ಅವರ ಜತೆ ಗೃಹಸಚಿವರು ನೇರ ಸಂಪರ್ಕ ಹೊಂದಿದ್ದರು. | ಕಿಮ್ಮನೆ ರತ್ನಾಕರ ಮಾಜಿ ಸಚಿವ

ಇದ್ದ ಹುದ್ದೆಯೂ ನಷ್ಟ! ಅಡ್ಡದಾರಿಯಲ್ಲಿ ಲಂಚಕೊಟ್ಟು ಸಿವಿಲ್​ ಸಬ್​ ಇನ್​ಸ್ಪೆಕ್ಟರ್​ ಹುದ್ದೆ ಗಿಟ್ಟಿಸಿಕೊಂಡಿದ್ದ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ (ಕೆಎಸ್​ಐಎಸ್​ಎ್​) ಪ್ರೊಬೇಷನರಿ ಎಸ್​ಐ ಎಚ್​. ಯಶವಂತಗೌಡ ಜೈಲು ಪಾಲಾಗಿದ್ದಾನೆ. ಕೆಎಸ್​ಐಎಸ್​ಎ್​ ಎಸ್​ಐ ನೇಮಕಾತಿಯಲ್ಲಿ ಆಯ್ಕೆಯಾಗಿ ಯಶವಂತಗೌಡ, ಸಿವಿಲ್​ ಎಸ್​ಐ ಆಗುವ ಆಸೆಯಿಂದ ಲಿಖಿತ ಪರೀೆಯಲ್ಲಿ ಅಕ್ರಮ ಎಸಗಿದ್ದ. ಸಿಐಡಿ ತನಿಖೆಯಲ್ಲಿ ಓಎಂಆರ್​ ಶೀಟ್​ ತಿದ್ದಿರುವುದು ಕಂಡು ಬಂದಿದೆ. ಸಿಐಡಿ ನೀಡಿದ ವರದಿ ಆಧಾರದ ಮೇಲೆ ಕೆಎಸ್​ಐಎಸ್​ಎ್​ ಡಿಐಜಿ ಬಿ.ಎಸ್​. ಲೋಕೇಶ್​ಕುಮಾರ್​, ಯಶವಂತಗೌಡನನ್ನು ಅಮಾ ನತು ಮಾಡಿ ಶುಕ್ರವಾರ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net