ಮಠಗಳ ಸಂಪರ್ಕದಿಂದ ಧನಾತ್ಮಕ ಚಿಂತನೆ

AKR SHATSTAL
Published on

ಅಕ್ಕಿಆಲೂರ: ಮಠಗಳ ಸಂಪರ್ಕದಿಂದ ಧನಾತ್ಮಕ ಚಿಂತನೆ ನೆಲೆಯೂರುತ್ತವೆ. ಮನುಷಾತ್ಮದಿಂದ ದೇವಾತ್ಮನಾಗುವುದು ಮೋಕ್ಷದ ಪ್ರಧಾನ ಗುರಿ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಸ್ಥಳೀಯ ವಿರಕ್ತಮಠದಲ್ಲಿ ಮಂಗಳವಾರ ಲಿಂ.ಹಾನಗಲ್ಲ ಕುಮಾರ ಶಿವಯೋಗಿಗಳು, ಲಿಂ. ಚನ್ನವೀರ ಶ್ರೀಗಳ ಪುಣ್ಯ ಸ್ಮರಣೋತ್ಸವ ಹಾಗೂ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಿರುವ ಅಕ್ಕಿಆಲೂರ ಉತ್ಸವಕ್ಕೆ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿ ಮಾತನಾಡಿದರು. ಇಲ್ಲ, ಅಸಾಧ್ಯ, ಕಷ್ಟ, ಹಣೆಬರಹ ಎಂದು ವ್ಯಕ್ತಿತ್ವ ರೂಪಿಸಿಕೊಳ್ಳುವುದರಿಂದ ವಂಚಿತವಾಗುತ್ತಿರುವವರು ನಿತ್ಯ ಮಠಗಳ ಸಂಪರ್ಕಕ್ಕೆ ಬಂದರೆ, ನಕಾರಾತ್ಮಕ ಚಿಂತನೆಗಳಿಂದ ಧಾನಾತ್ಮಕ ಚೈತನ್ಯ ಇಮ್ಮಡಿಗೊಳ್ಳುತ್ತದೆ. ಸ್ವಾಮಿ ಎಂದರೆ ಸಮಾಜದ ಸೇವಕ ಎಂದು ಸಾರಿದ ಹಾನಗಲ್ಲ ಕುಮಾರೇಶ್ವರ ಸ್ವಾಮೀಜಿಯಿಂದ ಸ್ಥಾಪಿತವಾದ ಶಿವಯೋಗ ಮಂದಿರ, ವಟುಗಳಿಗೆ ಸ್ವಾಮೀತ್ವದ ಸಂಸ್ಕಾರ ನೀಡಿ, ನಾಡಿನ ಮಠಗಳಿಗೆ ಸ್ವಾಮೀಜಿಗಳನ್ನು ಕಳಿಸುತ್ತಿದೆ ಎಂದರು.

ಬಿಜಕಲ್ ವಿರಕ್ತಮಠದ ಶಿವಲಿಂಗ ಸ್ವಾಮೀಜಿ ಮಾತನಾಡಿ, ಯಾವ ವ್ಯಕ್ತಿ ಪರಿಸರ ಕುರಿತು ಕಾಳಜಿ ಹೊಂದಿರುತ್ತಾನೋ, ಅವನಿಗೆ ತಿಳಿಯದಂತೆ ಅವನ ಉನ್ನತಿಯಾಗುತ್ತದೆ. ಪ್ರಾಣಿ, ಪಕ್ಷಿ, ಆಶ್ರಯ ನೀಡಿದ ಭೂಮಿ, ಮಕ್ಕಳಲ್ಲಿ ಹಾಗೂ ಪ್ರಕೃತಿಯಲ್ಲಿ ದೇವರನ್ನು ಕಾಣಬೇಕು ಎಂದರು.

ಬಾಳೂರ ಅಡವಿಸ್ವಾಮಿಮಠದ ಕುಮಾರ ಶ್ರೀ, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀ, ಶಿವಬಸವ ಶ್ರೀ, ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶಗೌಡ ಪಾಟೀಲ, ಕೊಟ್ಟೂರಬಸಪ್ಪ ಬೆಲ್ಲದ, ಸದಾಶಿವ ಕಂಬಾಳಿ, ಉದಯ ವಿರುಪಣ್ಣನವರ, ಕುಮಾರ ದೇಶಮುಖ, ಸಚೀನ ಗೌಳಿ, ರಾಜಣ್ಣ ಪಾಟೀಲ, ರಾಜಣ್ಣ ಸಾಲವಟಿಗಿ, ಸಿದ್ರಾಮಪ್ಪ ವಿರುಪಣ್ಣನವರ, ಬಾಬಣ್ಣ ಮುತ್ತಿನಕಂತಿಮಠ, ವೀರಭದ್ರಪ್ಪ ಉಪ್ಪಿನ, ಕಲ್ಲನಗೌಡ ಪಾಟೀಲ, ಪ್ರವೀಣ ಸುಬ್ಬಣ್ಣನವರ, ವೀರೇಶ ನೆಲುವಿಗಿ, ಪವನ ಜಾಬೀನ, ಪ್ರಕಾಶ ದುರ್ಗದ, ಸೋಮಯ್ಯ ಸೋಮಯ್ಯಗಳಮಠ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net