ಯಶಸ್ಸಿಗೆ ಧನಾತ್ಮಕ ಚಿಂತನೆ ಅಗತ್ಯ

ಕನಕಗಿರಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಡಾ.ಮೆಹಬೂಬ್ ಅಲಿ ಮಂಗಳೂರು ಅವರನ್ನು ಗೌರವಿಸಲಾಯಿತು. ಶಿಕ್ಷಕರಾದ ರಾಘವೇಂದ್ರ, ವಿಜಯೇಂದ್ರ, ಮಂಜುಳಾ ಮೇಟಿ, ಕನಕಾಚಲ, ಡಿ.ಯು.ಪಾಟೀಲ್ ಇತರರಿದ್ದರು

Published on

ಕನಕಗಿರಿ: ಯಶಸ್ಸಿಗೆ ಧನಾತ್ಮಕ ಚಿಂತನೆ ಅತ್ಯವಶ್ಯ. ಆದ್ದರಿಂದ ವಿದ್ಯಾರ್ಥಿಗಳು ಧನಾತ್ಮಕ ಚಿಂತನೆ ಜತೆ ಸತತ ಅಧ್ಯಯನದಿಂದ ಪರೀಕ್ಷೆ ಎದುರಿಸಿ ಯಶಸ್ಸು ನಿಮ್ಮದಾಗಿಸಿಕೊಳ್ಳಿ ಎಂದು ಸಂಪನ್ಮೂಲ ವ್ಯಕ್ತಿ ಮೆಹಬೂಬ್ ಅಲಿ ಮಂಗಳೂರು ಹೇಳಿದರು.

ನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷಾ ಭಯ ನಿವಾರಣಾ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇದು ಶೈಕ್ಷಣಿಕ ಜೀವನದ ಮಹತ್ತರ ಹೆಜ್ಜೆ. ಪರೀಕ್ಷೆ ಎಂದರೆ ಭಯ ಪಡುವುದಕ್ಕಿಂತ ಧನಾತ್ಮಕವಾಗಿ ಆಲೋಚಿಸಬೇಕು. ನಿರ್ದಿಷ್ಟ ಗುರಿ ತಲುಪಲು ಸಮಯ ವ್ಯರ್ಥ ಮಾಡದೆ ಸತತ ಅಧ್ಯಯನ ನಡೆಸಿ ಪರೀಕ್ಷೆಗೆ ಸಿದ್ಧರಾದರೆ ಭಯಪಡುವ ಅವಶ್ಯಕತೆಯಿಲ್ಲ ಎಂದರು. ಕೆಪಿಎಸ್ ಉಪ ಪ್ರಾಚಾರ್ಯ ಜಗದೀಶ ಹಾದಿಮನಿ ಮಾತನಾಡಿ, ಕಳೆದ ಶೈಕ್ಷಣಿಕ ವಷರ್ದಿಂದ ಶಿಕ್ಷಕರು ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಹೆಚ್ಚುವರಿ ತರಗತಿ ಮೂಲಕ ಫಲಿತಾಂಶ ಸುಧಾರಣೆಗೆ ಮುಂದಾಗಿದ್ದಾರೆ ಎಂದು ತಿಳಿಸಿದರು. ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲ್‌ಕುಮಾರ, ಶಿಕ್ಷಕರಾದ ರಾಘವೇಂದ್ರ, ವಿಜಯೇಂದ್ರ, ಮಂಜುಳಾ ಮೇಟಿ, ಕನಕಾಚಲ, ಡಿ.ಯು.ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net