ಸಕಾರಾತ್ಮಕ ಭಾವನೆಯೊಂದಿಗೆ ಗುರಿ ಸಾಧಿಸಿ

23gurgunta1
Published on

ಗುರುಗುಂಟಾ: ನೆಮ್ಮದಿಯ ಜೀವನಕ್ಕಾಗಿ ಕಾನೂನುಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಲಿಂಗಸುಗೂರು ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ದೇಶಮುಖ ಶಿವಕುಮಾರ ಹೇಳಿದರು.

ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಅಂಗವಾಗಿ ಗ್ರಾಮದ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್, ಶಿಕ್ಷಣ ಇಲಾಖೆ ಮತ್ತು ಸಿಂಧನೂರಿನ ಎಚ್.ಮರಿಯಪ್ಪ ವಕೀಲ ಹೆಡಗಿಬಾಳ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

ಸಕಾರಾತ್ಮಕ ಭಾವನೆ ಮತ್ತು ಪ್ರಯತ್ನದೊಂದಿಗೆ ಗುರಿ ಸಾಧಿಸುವ ಛಲ ಹೊಂದಬೇಕು. ಕನಸಿನಲ್ಲಿ ಗುರಿ ಕಾಣಬಾರದು. ಇಟ್ಟುಕೊಂಡ ಗುರಿ ನಿದ್ರಿಸಲು ಬಿಡಬಾರದು ಅಂತಹ ಗುರಿಗಳನ್ನು ಇಟ್ಟುಕೊಂಡು ಆದರ್ಶ ವಿದ್ಯಾರ್ಥಿಗಳಾಗಿ ಎಂದು ದೇಶಮುಖ ಶಿವಕುಮಾರ ಕರೆ ನೀಡಿದರು.

ಹೆಡಗಿಬಾಳ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ, ಮರಿಯಪ್ಪ ವಕೀಲ, ಮುಖ್ಯ ಶಿಕ್ಷಕ ಫಾ.ರಾಬರ್ಟ್ ಪೌಲ್ ಪೂಸಾಮಿ, ನಾಡತಹಸೀಲ್ದಾರ್ ರಂಗಪ್ಪ ನಾಯಕ, ಶರಣಬಸವ ಪಟ್ಟಣಶೆಟ್ಟಿ ವಕೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net