

ಅಳವಂಡಿ: ರಾಮ ರಾವಣನನ್ನು, ಚಾಮುಂಡೇಶ್ವರಿ ಮಹಿಷಾಸುರನನ್ನು ಕೊಂದ ಹಾಗೆ ನಮ್ಮ ನಿಮ್ಮೊಳಿಗಿನ ದುಷ್ಟ ಭಾವ, ಕೆಟ್ಟಗುಣಗಳು ನಾಶವಾಗಲಿ. ದಸರಾ ಹಬ್ಬ ಗೆಲುವಿನ ಸಂಕೇತ ಎಂದು ಶ್ರೀ ಮರುಳಾರಾಧ್ಯ ಶಿವಾಚಾರ್ಯ ಹೇಳಿದರು.
ಇದನ್ನೂ ಓದಿ: https://www.vijayavani.net/suntikoppa-dasara
ಗ್ರಾಮದ ಸಿದ್ದೇಶ್ವರ ಮಠದಿಂದ ದಸರಾ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಜೀವನದಲ್ಲಿ ಎದುರಾಗುವ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ಮುನ್ನೆಡೆಯಲು ಬೇಕಿರುವ ಶಕ್ತಿ-ಸಾಮರ್ಥ್ಯ,
ಸುಖ, ಶಾಂತಿ, ಆರೋಗ್ಯ, ಸಂಪತ್ತನ್ನು ದೇವಿ ಕರುಣಿಸಲಿ. ಜೀವನದಲ್ಲಿ ಕೆಟ್ಟ ವಿಚಾರಗಳನ್ನು ದೂರವಾಗಿಸಿ ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಬೇಕು. ಇದು ಸಾಧನೆಗೆ ಅನೂಕೂಲ ಆಗಲಿದೆ ಎಂದರು.
ಸರ್ವಾಲಂಕೃತ ಅಡ್ಡಪಲ್ಲಕ್ಕಿಯಲ್ಲಿ ಶ್ರೀ ಮರುಳಾರಾಧ್ಯರ ಮೆರವಣಿಗೆ ದೇವಸ್ಥಾನದಿಂದ ಪ್ರಾರಂಭಗೊಂಡು ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಾಗಿ ಬನ್ನಿಕಟ್ಟಿ ತಲುಪಿತು. ಅಲ್ಲಿ ಪೂಜೆ ನೆರವೇರಿಸಿ ಮರಳಿ ಮಠಕ್ಕೆ ಆಗಮಿಸಿತು. ಮೆರವಣಿಗೆಗೆ ಮಹಿಳೆಯರ ಕಳಸ, ವಾದ್ಯ ಮೇಳಗಳು ಮೆರುಗು ನೀಡಿದವು.
ಪ್ರಮುಖರಾದ ಶ್ರೀ ಗುರುಮೂರ್ತಿಸ್ವಾಮಿ ಇನಾಮದಾರ, ಡಾ.ಸಿದ್ದಲಿಂಗಸ್ವಾಮಿ ಇನಾಮದಾರ, ಅನ್ವರ ಗಡಾದ, ಚನ್ನವೀರಸ್ವಾಮಿ, ಈಶಪ್ಪ ಜೋಳದ, ವೀರಭದ್ರಯ್ಯ ಶಿರೂರ, ಮಂಜುನಾಥ ಹಿರೇಮಠ, ಗೀರಿಶ ಕಣವಿ, ಸುರೇಶ ದಾಸರಡ್ಡಿ, ನಜರುದ್ದೀನ್, ಚಿಕ್ಕವೀರಜ್ಜ, ರಮೇಶ ಭಾವಿಹಳ್ಳಿ, ಶ್ರೀ ಶೈಲಪ್ಪ ಹಕ್ಕಂಡಿ, ಬಸಯ್ಯ, ಅಶೋಕ ಬಂಡಿ ಇತರರಿದ್ದರು.