ಮದ್ದಳೆ ನಾದದಿಂದ ಧನಾತ್ಮಕ ವಾತಾವರಣ

sanmana
ಶೇಷನಾಗಬನದಲ್ಲಿ ನಡೆದ ಮಡಾಮಕ್ಕಿ ಮೇಳದ ಯಕ್ಷಗಾನ ಪ್ರದರ್ಶನ ಸಂದರ್ಭ ಪ್ರಸಂಗಕರ್ತ ಡಾ.ಬಸವರಾಜ್ ಶೆಟ್ಟಿಗಾರ್ ಅವರನ್ನು ಯಕ್ಷಾಭಿಮಾನಿಗಳು ಸನ್ಮಾನಿಸಿದರು.
Published on

ಕೋಟ: ಯಕ್ಷಗಾನದ ತಾಳ, ಮದ್ದಳೆ ಹಾಗೂ ಜಾಗಂಟೆ ಶಬ್ದದಿಂದ ಧನಾತ್ಮಕ ವಾತಾವರಣ ಉಂಟಾಗುತ್ತದೆ. ಪ್ರತಿ ಗ್ರಾಮದಲ್ಲೂ ಸಂವತ್ಸರಕ್ಕೆ ಒಂದು ಬಾರಿಯಾದರೂ ಯಕ್ಷಗಾನ ಪ್ರದರ್ಶನ ಆಯೋಜಿಸಬೇಕು ಎಂದು ಪ್ರಸಂಗಕರ್ತ ಡಾ.ಬಸವರಾಜ್ ಶೆಟ್ಟಿಗಾರ್ ಹೇಳಿದರು.

ಕುಂದಾಪುರ ರಾಯಪ್ಪನ ಮಠದ ಪರಿಸರದ ಶೇಷನಾಗಬನದಲ್ಲಿ ಮಡಾಮಕ್ಕಿ ಮೇಳದವರ ಯಕ್ಷಗಾನ ಪ್ರದರ್ಶನ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸ್ಥಳೀಯರಾದ ಶ್ರೀಕಾಂತ್ ಹೊಳ್ಳ, ನಾಗರಾಜ ಹೊಳ್ಳ, ನಾಗಪ್ಪ ಪೂಜಾರಿ, ರಾಮ ದೇವಾಡಿಗ, ಬಾಬುರಾಯ್ ಪ್ರಭು, ಅಮೃತಾ ಹೊಳ್ಳ, ಮೇಳದ ಪ್ರಧಾನ ಭಾಗವತ ಗೋಪಾಲಕೃಷ್ಣ ನಾಯಕ್ ಜಂಬೂರು ಶುಭಹಾರೈಸಿದರು. ಸೌಡ ಭಾಸ್ಕರ್ ವಂದಿಸಿದರು. ನಾಗರಾಜ ರಾಯಪ್ಪನಮಠ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net