

ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮಾತ್ರ ಕೈ ಕೈ ಹಿಡಿದುಕೊಂಡರೆ ಸಾಲದು, ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನೂ ಜತೆಯಲ್ಲಿ ಕರೆದುಕೊಂಡು ಹೋಗಲು ವಿವಿಧ ರಾಷ್ಟ್ರಗಳು ಮಾಡಿಕೊಂಡಿರುವ ಒಪ್ಪಂದವೇ ಜಿ&20 ಎಂದು ಆಕಾಶವಾಣಿ ಕಾರ್ಯಕ್ರಮದ ಮುಖ್ಯಸ್ಥ ಡಾ.ಎ.ಎಸ್.ಶಂಕರನಾರಾಯಣ ವಿವರಿಸಿದರು.
ಆಕಾಶವಾಣಿ ಬೆಂಗಳೂರು ಮತ್ತು ತಾಲೂಕಿನ ಕುರುಬೂರು ರೇಷ್ಮೆ ಕೃಷಿ ಮಹಾವಿದ್ಯಾಲಯದ ಆಶ್ರಯದಲ್ಲಿ ರೇಷ್ಮೆ ಕೃಷಿ ವಿವಿಯ ಚಂದ್ರ ಕಳಶ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿ&20 ಸಮ್ಮೇಳನ ಹಾಗೂ ಭಾರತದ ಕೃಷಿ ೇತ್ರದ ಬೆಳವಣೆಗೆ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿ, ಯುರೋಪಿಯನ್ ಯೂನಿಯನ್ಗೆ ಜಿ&20 ಎಂದು ನಾಮಕರಣ ಮಾಡಲಾಗಿದೆ. 2008ರಲ್ಲಿ ಹಲವು ರಾಷ್ಟ್ರಗಳು ಸೇರಿ ಏಷಿಯನ್ ಗ್ಲೋಬಲ್ ಹೆಸರಿನಲ್ಲಿ ಒಂದು ಗೂಡುತ್ತಿದ್ದವು. ಪ್ರಾರಂಭದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮಾತ್ರ ಒಕ್ಕೂಟ ರಚಿಸಿಕೊಂಡಿದ್ದವು. ಈಗ ಅಭಿವೃದ್ಧಿ ಹೊಂದಿರುವ ಮತ್ತು ಹೊಂದುತ್ತಿರುವ ರಾಷ್ಟ್ರಗಳನ್ನು ಜತೆಯಲ್ಲಿ ಸೇರಿಕೊಂಡು ಜಿ&20 ರಚಿಸಿಕೊಂಡಿದ್ದು, ಪ್ರಮುಖ ವಿಷಯಗಳ ರ್ನಿಣಯಗಳನ್ನು ಮಾಡಿಕೊಂಡು ಅದನ್ನು ಆಯಾ ರಾಷ್ಟ್ರಗಳು ಅನುಷ್ಠಾನಕ್ಕೆ ತರುವುದೇ ಇದರ ಉದ್ದೇಶ ಎಂದರು.
ಭಾರತ ಇಂದು ಅಭಿವೃದ್ಧಿ ವಿಷಯದಲ್ಲಿ ವಿಶ್ವಗುರುವಿನ ಸ್ಥಾನ ಪಡೆಯುತ್ತಿದೆ. ನಮ್ಮ ಈ ಮಣ್ಣಿಗೆ ಸತ್ವ ಇದೆ, ಆ ಮಣ್ಣು ಸತಾನದ ಕಾಲದಿಂದಲೂ ವಿಶ್ವಗುರುವಿನ ಸ್ಥಾನ ಪಡೆದುಕೊಂಡಿದೆ ಎಂದರು.
ಮಣ್ಣು ಮತ್ತು ಕೃಷಿಗೆ ಅವಿನಾಭವ ಸಂಬಂಧವಿದೆ, ಕೃಷಿ ಇಲ್ಲದೇ ಇದ್ದರೆ ಎಲ್ಲವೂ ಶೂನ್ಯ. ಭಾರತ ಒಂದು ಕಾಲದಲ್ಲಿ ಸಂಪನ್ಮೂಲವಿದ್ದರೂ ಬಡ ರಾಷ್ಟ್ರ ಎಂಬ ಹಣೆ ಪಟ್ಟಿ ಪಡೆದಿತ್ತು. ಇಂದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಸಮಯದಲ್ಲಿ ಕೃಷಿಗೆ ಉತ್ತಮ ಸ್ಥಾನ ಇದೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಈ ಬಾರಿ ಭಾರತಕ್ಕೆ ಜಿ&20 ಶೃಂಗಸಭೆಯ ಅಧ್ಯಕ್ಷತೆ ವಹಿಸುವ ಅವಕಾಶ ಸಿಕ್ಕಿದೆ. ಹಾಗಾಗಿ ನಮ್ಮ ದೇಶದ ಪ್ರಮುಖ ವಿಷಯಗಳನ್ನು ಮತ್ತು ನಮ್ಮ ಸಂಸತಿ, ಪರಂಪರೆಯನ್ನು ವಿಶ್ವದರ್ಜೆಯಲ್ಲಿ ಅನುಷ್ಠಾನ ತರಲು ಸಾಧ್ಯವಾಗಲಿದೆ ಎಂದರು.
ಕುರುಬೂರು ರೇಷ್ಮೆ ಕೃಷಿ ಕಾಲೇಜಿನ ಅಸೋಸಿಯೇಟ್ ಪೊ.ಡಾ.ಎನ್.ಮಂಜುಳಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಚಾರ ಸಂಕಿರಣ:
ರೇಷ್ಮೆ ಕೃಷಿ ಕಾಲೇಜು ಪ್ರಾಧ್ಯಾಪಕ ಡಾ.ರಾಮಕೃಷ್ಣ ನಾಯಕ, ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ.ಆರ್.ಪ್ರವಿಣ್ ಕುಮಾರ್, ರೇಷ್ಮೆ ಕೃಷಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಸ್ನೇಹಲ್ ಗಿರಿ, ಪ್ರಗತಿಪರ ರೈತರು ಹಾಗೂ ಕೃಷಿ ಪಂಡಿತ ಪ್ರಶಸ್ತಿ ಪುರಸತ ಮದನಹಳ್ಳಿ ರವಿಶಂಕರ್ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ, ಸಾಂಸತಿಕ ಕಾರ್ಯಕ್ರಮ ಅಕಾಶವಾಣಿ ಕಲಾವಿದರಾದ ಹನುಮಂತ ನಾಯಕ್ ಮತ್ತು ಸಂಗಡಿಗರಿಂದ ಪೂಜಾ ಕುಣಿತ ಏರ್ಪಡಿಸಲಾಗಿತ್ತು. ಆಕಾಶವಾಣಿ ಕಚೇರಿ ಮುಖ್ಯಸ್ಥರು ಹಾಗೂ ಉಪ ಮಹಾನಿರ್ದೇಶಕ ನೇಹಾಸ್ವಾಮಿ, ಕಾರ್ಯಕ್ರಮ ನಿರ್ವಾಹಕ ತಿಮ್ಮಪ್ಪ ಎಚ್.ಗೌಡ. ಕೃಷಿ ವಿವಿಯ ಕೃಷಿ ಶಿಕ್ಷಣ ನಿರ್ದೇಶಕ ಡಾ.ಕೆ.ಸಿ.ನಾರಾಯಣಸ್ವಾಮಿ, ಕುರುಬೂರು ರೇಷ್ಮೆ ಕೃಷಿ ಕಾಲೇಜಿನ ಡೀನ್ ಡಾ.ಪಿ.ವೆಂಕಟರಮಣ, ಕೆ.ಎಂ.ರಾಜಣ್ಣ, ಕೃಷಿ ವಿಜ್ಞಾನ ಕೇಂದ್ರದ ಡಾ.ಪಾಪಿರೆಡ್ಡಿ, ಎಂ.ವೆಂಕಟಾಚಲಪತಿ. ಡಾ.ಶಿವಪ್ಪ, ನವಾಜ್ ಅಹಮದ್ ಇತರರು ಇದ್ದರು.
.