ಜನ ಆರೋಗ್ಯವಾಗಿದ್ದರೆ ದೇಶ ಸುಭೀಕ್ಷ

poshan masacharane women and child department koppal
Published on

ಕೊಪ್ಪಳ: ಪ್ರಜೆಗಳು ಆರೋಗ್ಯದಿಂದ ಇದ್ದರೆ ದೇಶವ ಅಭಿವೃದ್ಧಿಯತ್ತ ಸಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸಿದ್ದೇಶ್ವರ ಎನ್​. ಹೇಳಿದರು.

ಜಿಲ್ಲಾಡಳಿತದಿಂದ ನಗರದ ವಾಲ್ಮೀಕಿ ಭವನದಲ್ಲಿ ಇತ್ತೀಚೆಗೆ ನಡೆದ ಪೋಷಣ್​ ಮಾಸಾಚರಣೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ದೇಶದಲ್ಲಿ ಅನೇಕರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದರಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಎಲ್ಲರೂ ಉತ್ತಮ ಆರೋಗ್ಯ ಹೊಂದಬೇಕು. ಈ ನಿಟ್ಟಿನಲ್ಲಿ ಸರ್ಕಾರ ಪೋಷಣ್​ ಮಾಸಾಚರಣೆ ಮಾಡುತ್ತಿದೆ. ಮಹಿಳೆ, ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆ ಆಗಬೇಕು ಎಂದರು.

ಸಿಡಿಪಿಒ ರೋಹಿಣಿ ಕೊಟಗಾರ ಮಾತನಾಡಿ, ಸುಮೋಷಿತ್​ ಕಿಶೋರಿ, ಸಶಕ್ತ ನಾರಿ ಎಂಬ ಘೋಷ ವಾಕ್ಯದ ಮೂಲಕ ಸರಿಯಾದ ಶಿಕ್ಷಣ, ಶಿಶುಗಳ ಆರೈಕೆ, ಕಾಳಜಿ ವಿಷಯಗಳ ಬಗ್ಗೆ ವಿವರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ, ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ, ಪ್ರಶಸ್ತಿ ವಿತರಣೆ ಕೈ ತೋಳೆಯುವ ವಿಧಾನದ, ನೃತ್ಯ ನಡೆದವು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ಅನ್ನಪೂರ್ಣ ಕುಬಕಟ್ಟಿ, ಗಂಗಪ್ಪ, ರುಪಾ ಗಂಧದ, ಶಿವಶರಣಪ್ಪ ಗದ್ದಿ, ವಲಯ ಮೇಲ್ವಿಚಾರಕರು, ಪೋಷಣ್​ ಅಭಿಯಾನ ತಾಲೂಕು ಸಂಯೋಜಕರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net