

ಬೆಳಗಾವಿ : ಕಮತಗಿಯ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘದ ವತಿಯಿಂದ, ದಿ.ಮಹೇಶ ಕಲ್ಲೋಳ ವಿರಚಿತ ‘ಫೋಸ್ ಕೊಟ್ಟಾಳೋ.. ಫೋನ್ ನಂಬರ ಕೊಟ್ಟಾಳೋ..’ಹಾಸ್ಯ ನಾಟಕ ಜೂ.9ರಂದು ನಗರದ ಕಿಲ್ಲಾ ಕೋಟೆ ಎದುರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಪಾಪು ಕಲ್ಲೂರ ಹೇಳಿದರು.
ಬುಧವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಟಕದ ಪ್ರಾರಂಭದ ದಿನ ದಿವ್ಯ ಸಾನ್ನಿಧ್ಯವನ್ನು ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸಿಫ್ ಸೇಠ್ ಆಗಮಿಸಲಿದ್ದಾರೆ ಎಂದರು.
ಆಧುನಿಕ ದಿನಮಾನಗಳಲ್ಲಿ ರಂಗಭೂಮಿ ಅಳಿವಿನಂಚಿನಲ್ಲಿದೆ. ಆದರೆ ಜನರಿಗೆ ಮನರಂಜನೆ ನೀಡುವ ಯಾವುದೇ ಅಶ್ಲೀಲ್ ಪದ ಬಳಕೆ ಮಾಡದೆ ಕೌಟುಂಬಿಕ ನಾಟಕವನ್ನು ಮಾಡಲಾಗಿದೆ ಎಲ್ಲರೂ ಬಂದು ನಾಟಕ ನೋಡಿ ಪ್ರೋತ್ಸಾಹಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಶರತ್ ಕಾಂಬಳೆ, ರಿಯಾಜ್ ಕರಜಗಿ, ಬಿ.ಎ.ಪಾಟೀಲ ಇದ್ದರು.