

ಮುಂಡರಗಿ: ತಾಲೂಕು ಮಡಿವಾಳ ಮಾಚಿದೇವ ಸೇವಾ ಸಂಘ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಹಯೋಗದಲ್ಲಿ ಪಟ್ಟಣದಲ್ಲಿ ಮಂಗಳವಾರ ಶ್ರೀ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು. ಸಕಲ ವಾದ್ಯಮೇಳದೊಂದಿಗೆ ಸಂಭ್ರಮದಿಂದ ಭಾವಚಿತ್ರ ಮೆರವಣಿಗೆ ಮಾಡಲಾಯಿತು.
ಚಿತ್ರದುರ್ಗದ ಡಾ.ಬಸವ ಮಾಚಿದೇವ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಜಗದ್ಗುರು ತೋಂಟದಾರ್ಯ ಶಾಖಾಮಠದಿಂದ ಹೊರಟ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾರ್ಯಕ್ರಮ ವೇದಿಕೆಗೆ ಆಗಮಿಸಿತು.
ಮಡಿವಾಳ ಸಮಾಜದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಮಡಿವಾಳರ, ದ್ಯಾಮಣ್ಣ ಮಡಿವಾಳರ, ಹನುಮಂತಪ್ಪ ಮಡಿವಾಳರ, ಮಡಿವಾಳಪ್ಪ ಮಡಿವಾಳರ, ಮಂಜುಳಾ ಮಡಿವಾಳರ, ಮಂಜಪ್ಪ ಮಡಿವಾಳರ, ಎಂ.ಕೆ. ಹನುಮಂತಪ್ಪ, ಬಸವರಾಜ ಮಡಿವಾಳರ, ಶಕುಂತಲಾ ಮಡಿವಾಳರ, ರತ್ನಾ ಮಡಿವಾಳರ, ವಿಜಯಲಕ್ಷ್ಮೀ ಮಡಿವಾಳರ, ಶೋಭಾ ಮಡಿವಾಳರ, ಕಸ್ತೂರೆಮ್ಮ ಮಡಿವಾಳರ, ದ್ರಾಕ್ಷಾಯಿಣಿ ಮಡಿವಾಳರ, ಲಲಿತಾ ಮಡಿವಾಳರ, ಸುಮಾ ಮಡಿವಾಳರ, ಶಾಂತಾ ಮಡಿವಾಳರ, ಬಸಪ್ಪ ಮಡಿವಾಳರ, ಇತರರಿದ್ದರು.