ಲಿಂ. ಕುಮಾರ ಶಿವಯೋಗಿಗಳ ಭಾವಚಿತ್ರ ಮೆರವಣಿಗೆ

20-HNL-3
Published on

ಹಾನಗಲ್ಲ: ಲಿಂ. ಕುಮಾರ ಶಿವಯೋಗಿಗಳ 95ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಶ್ರೀಗಳ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೆರವೇರಿತು.

ಗುರುವಾರ ಬೆಳಗ್ಗೆ ಶ್ರೀ ಕುಮಾರೇಶ್ವರ ವಿರಕ್ತಮಠದಿಂದ ಆರಂಭವಾದ ಮೆರವಣಿಗೆ ಪಟ್ಟಣದ ಗೌಳಿಗಲ್ಲಿ, ದತ್ತಾತ್ರೇಯ ಗುಡಿ ಓಣಿ, ತಾರಕೇಶ್ವರ ದೇವಸ್ಥಾನ, ಕಿತ್ತೂರ ಚನ್ನಮ್ಮ ರಸ್ತೆ ಮಾರ್ಗವಾಗಿ ಶ್ರೀಮಠ ತಲುಪಿತು. ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಮೆರವಣಿಗೆಗೆ ಚಾಲನೆ ನೀಡಿದರು. ಬಿಜಕಲ್ ಮಠದ ಶಿವಲಿಂಗ ಮಹಾಸ್ವಾಮಿಗಳು, ಚನ್ನವೀರಸ್ವಾಮಿ ಹಿರೇಮಠ, ಕಲ್ಯಾಣಕುಮಾರ ಶೆಟ್ಟರ, ನಿಂಗಪ್ಪ ಪೂಜಾರ, ಎಂ.ಎಸ್. ಅರಳೆಲೆಮಠ, ದಾನಪ್ಪ ಸಿಂಧೂರ, ಕೆ.ಜಿ. ಸವದತ್ತಿ, ಶಿವಯೋಗಿ ಅರಳೆಲೆಮಠ, ರವಿಕಿರಣ ಪಾಟೀಲ, ಬಸವರಾಜ ಎಲಿ, ಸುಮಂತ ನ್ಯಾಮತಿ, ರಾಜಶೇಖರ ಸಿಂಧೂರ, ರಾಜೇಶ ಗುಡಿ, ಸುರೇಶ ಸಿಂಧೂರ, ಮಹಲಿಂಗಪ್ಪ ಅಕ್ಕಿವಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net