ವಿದ್ಯುತ್ ಲೋಡ್ ಶೆಡ್ಡಿಂಗ್ ನಿಲ್ಲಿಸಿ

PORTEST-KOPPAL-FORMER-DROUGHT
PROTEST-KOPPAL-FORMERS-DROUGHT
ವಿವಿಧ ಬೇಡಿಕೆ ಈಡೇರಿಗೆ ಒತ್ತಾಯಿಸಿ ರೈತರು ಬುಧವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಶ್ರೀನಿವಾಸ ಭೋವಿ, ಶ್ರೀಧರಗೌಡ ಪೊ.ಪಾ., ಪದಾಧಿಕಾರಿಗಳಾದ ದುರುಗಪ್ಪ ಬಡಗಿ, ರಾಮಣ್ಣ ಹೊಸೂರು, ನಾಗಪ್ಪ ಕಬ್ಬೇರ್, ಪ್ರಕಾಶ ಶಾನಭೋಗ ಇದ್ದರು.
Published on

ಕೊಪ್ಪಳ: ಮಳೆ ಇಲ್ಲದೆ ಬೆಳೆ ನಾಶವಾಗುತ್ತಿದೆ. ವಿದ್ಯುತ್ ಲೋಡ್ ಶೆಡ್ಡಿಂಗ್ ನಿರಂತರವಾಗಿದ್ದು, ನೀರಾವರಿ ಇದ್ದವರಿಗೂ ಬೆಳೆ ಉಳಿಸಿಕೊಳ್ಳಲು ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಪದಾಧಿಕಾರಿಗಳು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಮಳೆ ಇಲ್ಲದೆ ಬೆಳೆಗಳು ಒಣಗುತ್ತಿವೆ. ನೀರಾವರಿ ಸೌಲಭ್ಯ ಇದ್ದವರಿಗೆ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ. ಹಗಲಿನಲ್ಲಿ 7 ಗಂಟೆ ವಿದ್ಯುತ್ ಪೂರೈಸಬೇಕು. ಆದರೆ, ಜೆಸ್ಕಾಂ ಅಧಿಕಾರಿಗಳು ರಾತ್ರಿ ವೇಳೆ ತಮ್ಮಿಷ್ಟದಂತೆ ವಿದ್ಯುತ್ ನೀಡುತ್ತಿದ್ದಾರೆ. ಲೋಡ್ ಶೆಡ್ಡಿಂಗ್ ನಿರಂತರವಾಗಿದೆ. ರಾತ್ರಿ ವೇಳೆ ಜಮೀನಿಗೆ ನೀರುಣಿಸುವುದು ಸವಾಲಾಗುತ್ತಿದೆ. ಕಾಡು ಪ್ರಾಣಿಗಳ ದಾಳಿ ನಡೆಯುತ್ತಿದ್ದು, ರೈತರು ಭಯ ಭೀತರಾಗಿದ್ದಾರೆಂದು ಅಳಲು ತೋಡಿಕೊಂಡರು.

ಸರ್ಕಾರ ತಕ್ಷಣ ಬರ ಘೋಷಿಸಿ, ಪ್ರತಿ ಎಕರೆಗೆ 30ಸಾವಿರ ರೂ. ಬೆಳೆನಷ್ಟ ಪರಿಹಾರ ನೀಡಬೇಕು. ಹಗಲಿನಲ್ಲಿ ನಿರಂತರವಾಗಿ 7 ಗಂಟೆ ವಿದ್ಯುತ್ ಪೂರೈಸಬೇಕು. ಲೋಡ್ ಶೆಡ್ಡಿಂಗ್ ಮಾಡಬಾರದು. ಸುಟ್ಟ ವಿದ್ಯುತ್ ಪರಿವರ್ತಕಗಳನ್ನು ತಕ್ಷಣ ಬದಲಾಯಿಸಿ ಕೊಡಬೇಕು. ರೈತರ ಬೇಡಿಕೆಗೆ ಸ್ಪಂದಿಸದ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ ಭೋವಿ, ಕಾರ್ಯದರ್ಶಿ ಶ್ರೀಧರಗೌಡ ಪೊ.ಪಾ., ಪದಾಧಿಕಾರಿಗಳಾದ ದುರುಗಪ್ಪ ಬಡಗಿ, ರಾಮಣ್ಣ ಹೊಸೂರು, ನಾಗಪ್ಪ ಕಬ್ಬೇರ್, ಪ್ರಕಾಶ ಶಾನಭೋಗ, ನಿಂಗಪ್ಪ ಕೂಕನಪಳ್ಳಿ, ಕನಕಪ್ಪ ಕಬ್ಬೇರ, ಗವಿಸಿದ್ದಪ್ಪ, ಜಂಬಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net