

ಸಿಂಧನೂರು: ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಹಮಾಲಿ ಕಾರ್ಮಿಕರ ಫೆಡರೆಷನ್ ರಾಜುಗೌಡ ಬಾದರ್ಲಿಗೆ ಮನವಿ ಸಲ್ಲಿಸಿತು.
ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಮಾಡಬೇಕು. ಹಮಾಲಿ ಕಾರ್ಮಿಕರ ಫೆಡರೆಷನ್‌ಗೆ ಪ್ರಾತಿನಿದ್ಯ ನೀಡಬೇಕು. ಅಸಂಘಟಿತ ಕಾರ್ಮಿಕರ ಭವಿಷ್ಯ ನಿಧಿ ಯೋಜನೆ (ಪಶ್ಚಿಮ ಬಂಗಾಳ ಮಾದರಿ) ಕಾನೂನು ಸ್ವರೂಪದಲ್ಲಿ ಜಾರಿಮಾಡಿ, ರಾಜ್ಯ ಬಜೆಟ್‌ನಲ್ಲಿ ಸೂಕ್ತ ಹಣಕಾಸು ನೆರವು ನೀಡಬೇಕೆಂದು ಒತ್ತಾಯಿಸಿದರು.
ಪ್ರಧಾನಮಂತ್ರಿ ಜೀವನ ಭೀಮಾ, ಸುರಕ್ಷಾ ಹಾಗೂ ಶ್ರಮ ಯೋಗಿ ಮಾನ್ ಧನ್ ಯೋಜನೆ ಉಚಿತವಾಗಿ ಜಾರಿಮಾಡಬೇಕು. ಅಂಬೇಡ್ಕರ್ ಸಹಾಯ ಹಸ್ತ ಮತ್ತು ಇ-ಶ್ರಮ ಕಾರ್ಡ್ ಪಡೆದವರಿಗೆ ಸಾಮಾಜಿಕ ಭದ್ರತಾ ಸೌಲಭ್ಯ ನೀಡಬೇಕೆಂದು ಆಗ್ರಹಿಸಿದರು. ಕಾರ್ಮಿಕರ ಫೆಡರೆಷನ್ ತಾಲೂಕು ಸಮಿತಿ ಸದಸ್ಯರಾದ ಯಂಕಪ್ಪ ಕೆಂಗಲ್, ಮರಿಸ್ವಾಮಿ, ಮಹಿಬೂಬಸಾಬ ಇತರರು ಇದ್ದರು.