ಅಶ್ಲೀಲ ವೀಡಿಯೊ ತೋರಿಸಿ ಮಹಿಳೆಯಿಂದ 2.40 ಲಕ್ಷ ರೂ. ವಸೂಲಿ

Crime Logo
Published on

ಹಾನಗಲ್ಲ: ಮಹಿಳೆಯ ಅಶ್ಲೀಲ ವೀಡಿಯೊ ಹಾಗೂ ಫೋಟೋ ಇಟ್ಟುಕೊಂಡು ಆಕೆಗೆ ಬ್ಲಾೃಕ್ ಮೇಲ್ ಮಾಡಿ 2.40 ಲಕ್ಷ ರೂ. ವಸೂಲಿ ಮಾಡಿದ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ತಾಲೂಕಿನ ಬೊಮ್ಮನಹಳ್ಳಿ ಇಂದಿರಾ ಪ್ಲಾಟ್‌ನ ನಿವಾಸಿ ಹನುಮಂತಸಿಂಗ್ ಪರಶುರಾಮಸಿಂಗ್ ರಜಪೂತ (32) ಎಂಬುವನ ವಿರುದ್ಧ ಪ್ರಕರಣ ದಾಖಲಾಗಿರುವುದು.
ಈತ ಮಹಿಳೆಯೊಬ್ಬಳನ್ನು ಪ್ರೀತಿಸುವ ಸಮಯದಲ್ಲಿ ಆಕೆಯ ಅಶ್ಲೀಲ ವೀಡಿಯೊ ಹಾಗೂ ಪೋಟೊ ತೆಗೆದುಕೊಂಡಿದ್ದಾನೆ. ಅವುಗಳನ್ನು ಆಕೆಗೆ ತೋರಿಸಿ ನೀನು ಹಣ ಕೊಡದಿದ್ದರೆ ಇವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೆದರಿಸಿ 2.40 ಲಕ್ಷ ರೂ. ಹಾಗೂ ಮೂರು ಖಾಲಿ ಚಕ್‌ಗಳನ್ನು ತೆಗೆದುಕೊಂಡಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net