ಹಿಂದೂಗಳ ಜನಸಂಖ್ಯೆ ಕುಸಿತ, ಶೇ. 50 ರಷ್ಟು ಹಿಂದುಗಳು ಕಡಿಮೆಯಾದರೆ ಸಂವಿಧಾನಕ್ಕೆ ಉಳಿಗಾಲವಿಲ್ಲ ಎಂದ ಕನ್ಹೇರಿ ಶ್ರೀ

kanheri kadasiddheswara swamiji
ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ
Published on

ವಿಜಯಪುರ: ದೇಶದಲ್ಲಿ ದಿನದಿಂದ ದಿನಕ್ಕೆ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹಿಂದೂಗಳ ಜನಸಂಖ್ಯೆ ಪ್ರತಿಶತಃ 50ಕ್ಕಿಂತ ಕಡಿಮೆಯಾದರೆ ಸಂವಿಧಾನಕ್ಕೆ ಉಳಿಗಾಲವಿಲ್ಲ, ಪ್ರಜಾತಂತ್ರ ವ್ಯವಸ್ಥೆ ಉಳಿಯಲ್ಲ. ಇದಕ್ಕೆ ಬಾಂಗ್ಲಾದೇಶ ಸೂಕ್ತ ಉದಾಹರಣೆ ಎಂದು ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಬಸವನಬಾಗೇವಾಡಿ ಪಟ್ಟಣದಲ್ಲಿ ಮಂಗಳವಾರ ನಡೆದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ನೇತೃತ್ವದ ‘ಕ್ರಾಂತಿವೀರ ಬ್ರಿಗೇಡ್’ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕೇರಳದಲ್ಲಿ ಕಿಟಕಿ ಬದಲಾಯಿಸಬೇಕಾದರೆ ಇಸ್ಲಾಂ ಧರ್ಮ ಸೇರಬೇಕಾಗಿದೆ. ಕಾಸರಗೋಡಿನಲ್ಲಿ ಹಿಂದೂಗಳ ಮನೆಯ ಮುಂದೆಯೇ ಗೋವು ಕಡಿದು ಮಾಂಸ ಹಂಚಿಕೊಳ್ಳುತ್ತಾರೆ. ಹಿಂದೂ ಮಹಿಳೆಯರು, ಯುವತಿಯರ ಮೇಲೆ ಅತ್ಯಾಚಾರ ಹೆಚ್ಚಾಗುತ್ತಿದೆ. ಲವ್ ಜಿಹಾದ್ ಹೆಚ್ಚಾಗಿದೆ. ನೂರಾರು ಯುವತಿಯರು ಕಾಣೆಯಾಗಿದ್ದಾರೆ. ನಮ್ಮ ಯುವತಿಯರಿಗೆ ಧರ್ಮಭೋಧನೆ ಮಾಡಿಲ್ಲ. ಧರ್ಮಾಚರಣೆ ಕುರಿತು ನಮ್ಮ ಪಾಲಕರು ಮತ್ತು ಪೋಷಕರು ಮಕ್ಕಳಿಗೆ ಹೇಳಿಕೊಟ್ಟಿಲ್ಲ. ಹೀಗಾಗಿ ಕೆ.ಎಸ್.ಈಶ್ವರಪ್ಪ ಅವರು ಬ್ರಿಗೇಡ್ ಮೂಲಕ ಹಿಂದೂ ಧರ್ಮ ಜಾಗೃತಿಗೆ ಮುಂದಾಗಿದ್ದಾರೆ ಎಂದರು.

ಮುಸ್ಲಿಂ ತುಷ್ಠೀಕರಣದಿಂದಾಗಿ ಮುಂದೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಮಹಾರಾಷ್ಟ್ರ ಚುನಾವಣಾ ಪೂರ್ವ ಮೀಸಲಾತಿ ವಿಚಾರದಲ್ಲಿ ಮರಾಠಾ ಸಮಾಜದಿಂದ ಹೋರಾಟ ನಡೆದರೆ ಅದರ ವಿರುದ್ಧ ಒಬಿಸಿ ಆಂದೋಲನ ಆರಂಭವಾಯಿತು. ಹೀಗಾದರೆ ಹೇಗೆ? ಭಾರತೀಯ ಸಂಸ್ಕೃತಿ ಉಳಿಯಬೇಕಾದರೆ ಸಂಘಟಿತ ಹೋರಾಟ ಬೇಕು. ಕ್ರಾಂತಿಯಾಗಬೇಕು. ಅದಕ್ಕಾಗಿ ಅದ್ಯಮ್ಯ ಉತ್ಸಾಹ ಮತ್ತು ಧೈರ್ಯ ಬೇಕು. ಈ ನಿಟ್ಟಿನಲ್ಲಿ ಕ್ರಾಂತಿವೀರ ಬ್ರಿಗೇಡ್ ಕೆಲಸ ಮಾಡಲಿ. ಹಳ್ಳಿ ಹಳ್ಳಿಗಳಲ್ಲೂ ಇದರ ಶಾಖೆ ಉದ್ಘಾಟನೆಗೊಳ್ಳಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net