

ಮಸ್ಕಿ: ತೆಲಂಗಾಣದ ಕ್ರಾಂತಿಕಾರಿ ಕವಿ ಮತ್ತು ಗಾಯಕ ಗದ್ದರ್ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಲಿದ್ದಾರೆ. ಬಡವರು, ದಲಿತರ ಪರವಾದ ಕಾಳಜಿ ಹೊಂದಿದ್ದ ಗದ್ದರ್ ಹೋರಾಟ ಯುವ ಪೀಳಿಗೆಗೆ ಆದರ್ಶವಾಗಿದೆ ಎಂದು ದಲಿತ ಕವಿ ಸಿ.ದಾನಪ್ಪ ಹೇಳಿದರು.
ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಶ್ರದ್ಧಾಂಜಲಿ ಸಭೆಯಲ್ಲಿ ಸೋಮವಾರ ಮಾತನಾಡಿದರು. ಗದ್ದರ್ ಅವರ ಹಾಡುಗಳು ಸರ್ಕಾರದ ವಿರುದ್ಧ ಜನಪರವಾಗಿ ಧ್ವನಿ ಎತ್ತಿದ್ದವು. ಗದ್ದರ್ ಆಂಧ್ರಪ್ರದೇಶಕ್ಕೆ ಸೀಮಿತರಾಗಿರದೆ ದೇಶಾದ್ಯಂತ ಖ್ಯಾತಿ ಪಡೆದಿದ್ದರು. ಹಿಂದುಳಿದ ಸಮುದಾಯವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.