

ಶ್ರವಣಬೆಳಗೊಳ: ವಿಜಯವಾಣಿ ದಿನಪತ್ರಿಕೆಯು ಹೊಸ ಹೊಸ ಪ್ರಯತ್ನದಿಂದಾಗಿ ಜನಮನ್ನಣೆ ಗಳಿಸಿದೆ ಎಂದು ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಸ್ವಸ್ತಿಶೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಹೊರತಂದ ಚಾರುಸ್ಮರಣೆ ವಿಶೇಷ ಪುರವಣಿಯನ್ನು ಬುಧವಾರ ಬಿಡುಗಡೆಗೊಳಿಸಿ ಮಾತನಾಡಿದರು.
ನಮ್ಮ ದೀಕ್ಷಾ ಗುರುಗಳಾದ ಪ್ರಾತಃಸ್ಮರಣೀಯ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಕುರಿತು ವಿಶೇಷ ಪುರವಣಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ಶ್ರೀಗಳ ಧಾರ್ಮಿಕ ಸೇವೆ, ಸಾಮಾಜಿಕ ಕಳಕಳಿ, ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ದಾಖಲಿಸುವ ಪ್ರಯತ್ನ ವಿಶೇಷವಾಗಿದೆ. ಮುಂದೆಯೂ ಪತ್ರಿಕೆ ಉತ್ತಮ ಕಾರ್ಯಗಳೊಂದಿಗೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಹಾಸನ ಜಿಲ್ಲಾ ವರದಿಗಾರ ರಮೇಶ್ ಹಂಡ್ರಂಗಿ, ಹಾಸನದ ಜಾಹೀರಾತು ವಿಭಾಗದ ಮುಖ್ಯಸ್ಥ ಬಿಪಿನ್, ಚನ್ನರಾಯಪಟ್ಟಣ ವರದಿಗಾರ ಮಂಜುನಾಥ್ ಅಂಚಿಹಳ್ಳಿ, ಶ್ರವಣಬೆಳಗೊಳ ವರದಿಗಾರ ನಾಗೇಂದ್ರ ಇದ್ದರು.