

ಬೆಳಗಾವಿ: ಕೆಎಲ್ಇ ಸಂಗೀತ ಮಹಾವಿದ್ಯಾಲಯ ಹಾಗೂ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಸಹಯೋಗದಲ್ಲಿ ಕೆಎಲ್‌ಇ ಸಂಗೀತ ಮಹಾವಿದ್ಯಾಲಯದ ದರ್ಶಿನಿ, ವರ್ಷಿಣಿ ಶೆಟ್ಟಿ ಸಹೋದರಿಯರಿಂದ ಮೆಲೋಡಿ ವರ್ಸಸ್ ಮೆಲಾಡಿ ಸಂಗೀತ ಕಾರ್ಯಕ್ರಮ ಈಚೆಗೆ ಜರುಗಿತು.
ಕಾರ್ಯಕ್ರಮದಲ್ಲಿ ಸಹೋದರಿಯರು ಅತ್ಯಂತ ಸುಶ್ರಾವ್ಯವಾಗಿ ಸಂಗೀತ ಪ್ರಸ್ತುತ ಪಡಿಸಿದರು. ಶಾಸ್ತ್ರೀಯ ಸಂಗೀತ, ಭಾವಗೀತೆ, ದಾಸವಾಣಿ, ಅಭಂಗ ಹಾಗೂ ಚೌಡಕಿ ಪದಗಳನ್ನು ಹಾಡಿ ನೆರೆದ ಸಭಿಕರ ಮನ ಗೆದ್ದರು. ಕೆಎಲ್‌ಇ ಆಸ್ಪತ್ರೆ ಡಾ.ಕರ್ನಲ್ ದಯಾನಂದ, ಪತ್ನಿ ಸರ್ವ ಮಂಗಲಾ ಹಾಗೂ ಸಂಗೀತ ಶಾಲೆ ಸಂಯೋಜಕ ಡಾ.ರಾಜೇಂದ್ರ ಬಾಂಧನಕರ, ಪ್ರಾಚಾರ್ಯ ಡಾ.ರಾಜಾರಾಮ್ ಅಂಬರದೇಕರ, ಪ್ರಾಧ್ಯಾಪಕಿ ಡಾ.ಸುನೀತಾ ಪಾಟೀಲ, ಡಾ.ದುರ್ಗಾ ನಾಡಕರ್ಣಿ, ಸಂಗೀತಾ ಕುಲಕರ್ಣಿ, ಯಾದವೀಂದ್ರ ಪೂಜಾರಿ, ನಿತೀನ ಸುತಾರ ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.ಪ್ರತಿ ತಿಂಗಳ ಮೂರನೇ ಶುಕ್ರವಾರ ಈ ಕಾರ್ಯಕ್ರಮ ಆಯೋಜಿಸುತ್ತ ಬರಲಾಗಿದೆ.