ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್‌ ಇನ್ನಿಲ್ಲ

padyana ganapti bhat
Published on

ಮಂಗಳೂರು: ಹಿರಿಯ ಭಾಗವತ ಹಾಗೂ ತಮ್ಮ ವಿಶಿಷ್ಟ ಸಂಗೀತ ಶೈಲಿಯ ಮೂಲಕ ಹೆಸರಾಗಿದ್ದ ಪದ್ಯಾಣ ಗಣಪತಿ ಭಟ್‌(66) ಮಂಗಳವಾರ ಮುಂಜಾನೆ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

45 ವರ್ಷಗಳಿಗೂ ಹೆಚ್ಚು ಕಾಲ ಪದ್ಯಾಣ ಗಣಪತಿ ಭಟ್‌ ಅವರು ಯಕ್ಷಗಾನ ಭಾಗವತರಾಗಿ ಮೆರೆದವರು. ಕುಂಡಾವು, ಚೌಡೇಶ್ವರಿ, ಸುರತ್ಕಲ್‌, ಮಂಗಳಾದೇವಿ, ಕರ್ನಾಟಕ, ಎಡನೀರು, ಹೊಸನಗರ ಮೇಳದಲ್ಲಿ ದುಡಿದವರು. ಸಾಂಪ್ರದಾಯಿಕ ಶೈಲಿಯಲ್ಲಿಯೇ ಮೂಲರಾಗಕ್ಕೆ ಲೋಪ ಬಾರದಂತೆ ಭಾಗವತಿಕೆ ನಡೆಸಿಕೊಂಡು ಬಂದವರು, ನೂರಾರು ಶಿಷ್ಯಂದಿರನ್ನು ಹೊಂದಿದ್ದಾರೆ. ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net