ಪಾಪರ್ ಆದ ಕಾಂಗ್ರೆಸ್ ಸರ್ಕಾರ

222 Joshi New 222
Published on

ಹುಬ್ಬಳ್ಳಿ : ರಾಜ್ಯ ಕಾಂಗ್ರೆಸ್ ಸರ್ಕಾರ ವಿಪರೀತ ಸಾಲ ಮಾಡಿದ್ದು, ಪಾಪರ್ ಆಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.

ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆದಾಯ ಕ್ರೋಢಿಕರದಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಮುದ್ರ್ರಾಂಕ ಶುಲ್ಕ, ಆಸ್ತಿ ತೆರಿಗೆ ಹೀಗೆ ಎಲ್ಲದರ ತೆರಿಗೆ ಹೆಚ್ಚಿಸಿದೆ. ಅಷ್ಟೇ ಭ್ರಷ್ಟಾಚಾರವೂ ಹೆಚ್ಚಿದೆ. ಇನ್ನೊಂದೆಡೆ ಅರ್ಧಂಬರ್ಧ ಗ್ಯಾರಂಟಿಗಳಿಗೆ ಖರ್ಚು ಹೆಚ್ಚು ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬರಪರಿಹಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರಿಗೆ ಕೇವಲ 2 ಸಾವಿರ ರೂ. ನೀಡಿರುವುದು ನಾಚಿಕೆಗೇಡು. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರ ಇದ್ದಾಗ ರೈತರಿಗೆ 27 ಸಾವಿರ ರೂಪ ಬರ ಪರಿಹಾರ ನೀಡಿದ್ದರು. ಈಗ ಕಾಂಗ್ರೆಸ್ ಸರ್ಕಾರ ಏಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಕೇಂದ್ರ ಸರ್ಕಾರ ಈಗಿನಂತೆಯೇ ಅನುದಾನ ನೀಡಿತ್ತು. ಆದರೆ ಆಗ ಈಗಿನ ಸರ್ಕಾರಕ್ಕಿಂತಲೂ ದುಪ್ಪಟ್ಟು ಪರಿಹಾರವನ್ನು ನೀಡಲಾಗಿತ್ತು ಎಂದರು.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಪರಿಹಾರ ಎಲ್ಲ ರೈತರಿಗೆ ತಲುಪಿದೆ. ಆದರೆ, ಕಾಂಗ್ರೆಸ್​ನವರು ಕೇವಲ 2 ಸಾವಿರ ರೂ. ಬರ ಪರಿಹಾರ ನೀಡುವ ಮೂಲಕ ರೈತರನ್ನು ಕಡೆಗಣಿಸಿದೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net