

ಮಡಿಕೇರಿ:
ಇನ್ನು 15 ದಿನಗಳಲ್ಲಿ ಗಣೇಶ ಚತುರ್ಥಿ ಬರುತ್ತದೆ. ಈ ಹಿನ್ನೆಲ್ಲೆಯಲ್ಲಿ ವಿನಾಯಕನನ್ನು ಕುಳ್ಳಿರಿಸಿ ಪೂಜೆ ಸಲ್ಲಿಸಲು ಎಲ್ಲೆಡೆ ಭರದ ಸಿದ್ಧತೆ ನಡೆದಿದೆ. ಹಬ್ಬದ ಈ ಸಂಭ್ರಮ ಹೆಚ್ಚಿಸಲು ಪರಿಸರ ಪೂರಕ ಆಚರಣೆಗಳಿಗೆ ಒತ್ತು ಕೊಡುವಂತೆ ಜಾಗೃತಿ ಕಾರ್ಯಕ್ರಮಗಳೂ ಅಲ್ಲಲ್ಲಿ ಏರ್ಪಾಡಾಗುತ್ತಿದೆ. ಸ್ಥಳೀಯ ಸಂಸ್ಥೆಗಳು, ಪೊಲೀಸ್ ಇಲಾಖೆಯಿಂದಲೂ ಸಭೆ ನಡೆಸಿ ಸಲಹೆ ಸೂಚನೆಗಳನ್ನು ಕೊಡಲಾಗುತ್ತಿದೆ.
ಭಾದ್ರಪದ ಮಾಸ ಶುಕ್ಲ ಪಕ್ಷದ ಚತುರ್ಥಿ ದಿನ ಆಚರಿಸಲಾಗುವ ಗಣೇಶ ಚತುರ್ಥಿಯನ್ನು ಗಣೇಶನ ಹುಟ್ಟಿದ ದಿನ ಎಂದು ಆಸ್ತಿಕರು ನಂಬುತ್ತಾರೆ. ಮನೆ ಮನೆಗಳಲ್ಲಿ ಸಂಭ್ರಮದಿAದ ಆಚರಿಸಲಾಗುತ್ತಿದ್ದ ಈ ಹಬ್ಬ ಸ್ವಾತಂತ್ರ‍್ಯ ಹೋರಾಟದ ಸಮಯದಲ್ಲಿ ಸಾರ್ವತ್ರಿಕ ಆಚರಣೆಯ ರೂಪ ಪಡೆದುಕೊಂಡಿತು. ಜನರನ್ನು ಒಗ್ಗೂಡಿಸುವಲ್ಲಿ ಗಣೇಶೋತ್ಸವ ಮಹತ್ವದ ಪಾತ್ರ ವಹಿಸಿದ್ದು ಸ್ವಾತಂತ್ರö್ಯ ಹೋರಾಟದ ಇತಿಹಾಸದಲ್ಲಿ ದಾಖಲಾಗಿದೆ.
ಒಂದರಿAದ ಹಲವು ದಿನಗಳ ಕಾಲ ಸಂಘಟಕರ ಶಕ್ತಾö್ಯನುಸಾರ ಆಚರಿಸಲಾಗುವ ಈ ಹಬ್ಬದ ಸಂದರ್ಭ ವಿವಿಧ ಪ್ರಕಾರದ, ಬಗೆ ಬಗೆಯ ಆಕಾರದ ಆಕರ್ಷಕ ವೈವಿಧ್ಯಮಯ ಗಣೇಶನ ಮೂರ್ತಿಗಳನ್ನು ಕೆರೆ ಅಥವಾ ಜೇಡಿಮಣ್ಣಿನಿಂದ ತಯಾರಿಸಿ ಎಲೆ, ಹೂವು, ಬಾಳೆ ಕಂಬದಿAದ ಅಲಂಕೃತವಾದ ಮಂಟಪದಲ್ಲಿ ಕುಳ್ಳಿರಿಸಿ ಮೋದಕ, ಕಡುಬು ಮತ್ತಿತರ ತಿನಿಸುಗಳನ್ನು ಅರ್ಪಿಸಿ ಭಕ್ತಿಭಾವದಿಂದ ಪೂಜಿಸುವ ಪರಿಪಾಠ ಸಾಮಾನ್ಯ. ಆದರೆ ಇತ್ತೀಚಿನ ವರ್ಷಗಳಲ್ಲಿ ಹಬ್ಬದ ಆಚರಣೆಯ ಪರಿಭಾಷೆಯೇ ಬದಲಾಗಿದ್ದು ವಿಜೃಂಭಣೆಯ ಹೆಸರಲ್ಲಿ ಎಲ್ಲೆ ಮೀರುತ್ತಿರುವ ಆರೋಪ ವ್ಯಕ್ತವಾಗುತ್ತಿದೆ.
ಕೆರೆ ಮಣ್ಣು, ಜೇಡಿ ಮಣ್ಣು ಬಳಸಿ ತಯಾರಿಸುತ್ತಿದ್ದ ಪರಿಸರಕ್ಕೆ ಪೂರಕ ಗಣಪತಿಯ ಜಾಗಕ್ಕೆ ಈಗ ಅಪಾಯಕಾರಿ ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸಲಾಗುವ ಮೂರ್ತಿಗಳು ಬಂದಿವೆ. ಪ್ರಾಕೃತಿಕ ಬಣ್ಣಗಳನ್ನು ಬಳಸುತ್ತಿದ್ದಲ್ಲಿ ರಾಸಾಯನಿಕ ಬಣ್ಣಗಳ ಉಪಯೋಗ ಆಗುತ್ತಿದೆ. ಗಣಪತಿ ಮೂರ್ತಿ, ಪೆಂಡಾಲ್ ಅಲಂಕಾರಕ್ಕೆ ಪ್ಲಾಸ್ಟಿಕ್, ಥರ್ಮೊಕೋಲ್, ಸುಲಭವಾಗಿ ಕರಗದ ಅಲಂಕಾರಿಕ ವಸ್ತುಗಳ ಬಳಕೆ ಜಾಸ್ತಿ ಆಗಿದೆ. ಮನೋರಂಜನೆ ಎಂದುಕೊAಡು ನಡೆಯುವ ಸಂಗೀತ ಕಾರ್ಯಕ್ರಮಗಳಲ್ಲಿ ಅಬ್ಬರದ ಶಬ್ದ ಬಳಕೆ, ಅತಿಯಾದ ಸುಡು ಮದ್ದುಗಳ ಪ್ರಯೋಗವೂ ಗಣೇಶ ಹಬ್ಬ ಆಚರಣೆಯ ದಿಕ್ಕು ಬದಲಿಸಿರುವುದು ದೊಡ್ಡ ಪ್ರಮಾಣದಲ್ಲಿ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.
ಜಲಮೂಲದ ಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಬ್ಬದ ಸಂದರ್ಭದಲ್ಲಿ ಪ್ಲಾಸ್ಟರ್ ಆಫ್ ಪಾರೀಸ್‌ನಿಂದ ಮಾಡಿರುವ ಗಣೇಶ ಮೂರ್ತಿ ಬಳಕೆ ವಿರುದ್ಧ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಾ ಬರುತ್ತಿದೆ. ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಬಂದಿವೆ. ಆದರೆ ಪಿಒಪಿ ಗಣಪತಿ ಮೂರ್ತಿ ಬಳಕೆ ಹಾಗೆಯೇ ಮುಂದುವರಿದಿದೆ. ಹಬ್ಬಕ್ಕೆ ಇನ್ನು ಒಂದು ತಿಂಗಳು ಇರುವಂತೆಯೇ ವಿವಿಧ ಗಾತ್ರದ, ಬಗೆ ಬಗೆಯ ಅವತಾರಗಳ ಆಕರ್ಷಕ ಬಣ್ಣದ ಗಣೇಶನ ವಿಗ್ರಹಗಳು ಮಾರುಕಟ್ಟೆಗೆ ಬಂದುಬಿಡುತ್ತದೆ.
ಪರಿಸರ ಪೂರಕ ಗಣೇಶೋತ್ಸವ ಆಚರಣೆಗೆ ಸರ್ಕಾರ ಹೆಚ್ಚು ಮುತುವರ್ಜಿ ತೋರಿಸುತ್ತಿದೆ. ಪರಿಸರಕ್ಕೆ ಹಾನಿಯಾಗದಂತೆ ಹಬ್ಬ ಆಚರಿಸುವ ಸಂಬAಧ ಕಾಳಜಿ ತೋರಿಸಲಾಗುತ್ತಿದೆ. ಗಣಪತಿ ಮೂರ್ತಿ ಪ್ರತಿಷ್ಠಾಪನೆಯಿಂದ ವಿಸರ್ಜನೆ ತನಕವೂ ಪರಿಸರಕ್ಕೆ ಪೂರಕವಾಗಿ ಹಬ್ಬಾಚರಣೆ ಮಾಡುವಂತೆ ಸಾರ್ವಜನಿಕರಿಗೂ ಮನವಿ ಮಾಡಿಕೊಳ್ಳಲಾಗುತ್ತಿದೆ. 'ಪರಿಸರಸ್ನೇಹಿ ಮಣ್ಣಿನ ಗಣೇಶ ವಿಗ್ರಹ ಸ್ಥಾಪಿಸೋಣ- ಜಲಮೂಲಗಳನ್ನು ಉಳಿಸೋಣ' ಎನ್ನುವುದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಘೋಷವಾಕ್ಯ. ಜನಸಾಮಾನ್ಯರಿಗೆ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಗಣೇಶ ಚತುರ್ಥಿ ಆಗಮನದ ಜತೆಯಲ್ಲೇ ಪರಿಸರದ ಕಾಳಜಿ ಪಸರಿಸುವ ಮಹತ್ವದ ಕೆಲಸವೂ ಭರದಿಂದ ನಡೆಯುತ್ತಿದೆ. ಎಲ್ಲಾ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ ಹಾಗೂ ಹಳ್ಳಿ ಹಳ್ಳಿಗಳಲ್ಲೂ ವಿವಿಧ ರೀತಿಯಲ್ಲಿ ಪರಿಸರ ಜಾಗÊತಿ ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಯುವಜನತೆಯನ್ನು ಮುಟ್ಟುವ ಪ್ರಯತ್ನಕ್ಕೆ ಕೂಡ ವಿಜ್ಞಾನ ಪರಿಷತ್ ಕೈ ಹಾಕಿದೆ. ಪಿಒಪಿಯಿಂದ ಮಾಡಿದ ಗಣೇಶ ವಿಗ್ರಹ ಬಳಸುವುದರಿಂದ ಪರಿಸರದ ಮೇಲೆ ಆಗುವ ಹಾನಿ ಮತ್ತು ಮಣ್ಣಿನಿಂದ ತಯಾರಿಸಿದ ಗಣಪತಿ ಉಪಯೋಗಿಸುವುದರಿಂದ ಆಗುವ ಲಾಭದ ಬಗ್ಗೆ ಪರಿಣಾಮಕಾರಿಯಾಗಿ ಅರಿವು ಮೂಡಿಸುವ ಕೆಲಸ ನಡೆದಿದೆ.
ರಾಜ್ಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್, ಸೀಸದಂತಹ ವಿಷಕಾರಿ ಹಾಗೂ ರಾಸಾಯನಿಕ ಬಣ್ಣಲೇಪಿತ ಗಣೇಶ ವಿಗ್ರಹಗಳನ್ನು ಸ್ಥಾಪಿಸಿ ನಂತರ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ಸರ್ಕಾರ ನಿಷೇಧಿಸಿದೆ. ಇಂತಹ ಗಣೇಶ ವಿಗ್ರಹಗಳನ್ನು ತಯಾರಿಸುವುದು, ಮಾರಾಟ ಮಾಡುವುದರ ವಿರುದ್ಧವೂ ಜನಜಾಗÊತಿ ಮೂಡಿಸಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಸಂಸ್ಥೆಗಳಾದ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಮೂಲಕ ಸೂಚನೆ ನೀಡುವ ಕೆಲಸ ಮಾಡಲಾಗುತ್ತಿದೆ. ವಿಗ್ರಹ ವ್ಯಾಪಾರಸ್ಥರನ್ನೂ ಸಂಪರ್ಕಿಸಿ, ಸೀಸಲೇಪಿತ ರಾಸಾಯನಿಕ ಬಣ್ಣದಿಂದ ಕೂಡಿದ ಮತ್ತು ಪಿಒಪಿ ಗಣೇಶ ವಿಗ್ರಹಗಳ ಬದಲಿಗೆ ನೈಸರ್ಗಿಕವಾಗಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಮಾರಾಟ ಮಾಡುವಂತೆ ಮನವೊಲಿಸುವ ಕೆಲಸವನ್ನೂ ನಡೆಸಲಾಗುತ್ತಿದೆ.
ಸೀಸದಂತಹ ವಿಷಕಾರಿ ರಾಸಾಯನಿಕ ಬಣ್ಣ ಮತ್ತು ಲೋಹಲೇಪಿತ ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸ್(ಪಿ.ಓ.ಪಿ.)ನಿಂದ ತಯಾರಿಸಿದ ಗಣೇಶ ಮೂರ್ತಿ ಬಳಕೆ ಬೇಡ ಎನ್ನುವುದು ಪರಿಸರಾಸಕ್ತರ ಕಳಕಳಿ.
ನೈಸರ್ಗಿಕವಾಗಿ ದೊರೆಯುವ ಜೇಡಿಮಣ್ಣಿನಿಂದ ತಯಾರಿಸಿದ ಪುಟ್ಟ ಗಣೇಶ ವಿಗ್ರಹವನ್ನು ಸ್ಥಾಪಿಸಿ ಗಣೇಶ ಉತ್ಸವ ಆಚರಿಸಬಹುದು ಎನ್ನುವ ಸಲಹೆ ಇವರು ಕೊಡುತ್ತಾರೆ. ನದಿ, ಕೆರೆ, ಬಾವಿ ಮತ್ತಿತರ ಕಡೆಗಳಲ್ಲಿ ಅಥವಾ ಯಾವುದೇ ಜಲಮೂಲಗಳಲ್ಲಿ ಗಣಪತಿ ವಿಸರ್ಜನೆ ಬೇಡ. ಇದರ ಬದಲಿಗೆ ಬಕೆಟ್‌ನಲ್ಲಿ, ಸಂಚಾರಿ ವಿಸರ್ಜನಾ ವಾಹನದಲ್ಲಿ ಸಾಂಕೇತಿಕವಾಗಿ ವಿಸರ್ಜಿಸಬಹುದು. ಸೂಚಿತ ಕರೆ ಅಥವಾ ಇತರೆ ಸ್ಥಳದಲ್ಲಿ ವಿಸರ್ಜಿಸುವ ಮುನ್ನ ಹೂವು, ಬಟ್ಟೆ, ಪ್ಲಾಸ್ಟಿಕ್, ಹಾರ ಎಲ್ಲವನ್ನೂ ತೆಗೆಯಬೇಕು. ಸಾಮೂಹಿಕವಾಗಿ ನಡೆಸುವ ಗಣೇಶ ಮೂರ್ತಿಯ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಬೇಕು..ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಬೇಡ ಎನ್ನುವ ಸಲಹೆಯೂ ವ್ಯಕ್ತವಾಗುತ್ತಿದೆ. ಈ ಮಧ್ಯೆ ಅಬ್ಬರದ ಸಂಗೀತ, ಡಿಜೆ ಬಳಸದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇಂಥ ಪ್ರಕರಣಗಳು ಕಂಡುಬAದರೆ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಗಣೇಶನನ್ನು ಕೂರಿಸಿ ಪೂಜೆ ಮಾಡುವ ಸಂಪ್ರದಾಯ ನಮ್ಮಲ್ಲಿ ಬಹು ಹಿಂದಿನಿAದಲೂ ನಡೆದುಕೊಂಡು ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಗಣೇಶೋತ್ಸವದ ಆಚರಣೆಯ ರೀತಿ ಬದಲಾಗಿದೆ. ಪಿಒಪಿಯಂತಹ ಪದಾರ್ಥಗಳಿಂದ ತಯಾರಿಸಿದ, ರಾಸಾಯನಿಕ ಬಣ್ಣಗಳನ್ನು ಬಳಸಿದ ಗಣೇಶನ ವಿಗ್ರಹ ಬಳಕೆ ಜಾಸ್ತಿ ಆಗಿದೆ. ಈ ಬಗ್ಗೆ ಸಾಕಷ್ಟು ಜಾಗÊತಿ ಮೂಡಿಸಲಾಗುತ್ತಿದೆ. ನಮ್ಮ ಪ್ರಯತ್ನಕ್ಕೆ ನಿಧಾನಕ್ಕೆ ಫಲ ಸಿಗುತ್ತಿದ್ದು, ಜನ ಸಾಮಾನ್ಯರು ನೈಸರ್ಗಿಕ ಮಣ್ಣಿನ ವಿಗ್ರಹ ಕಡೆ ಆಕರ್ಷಿತರಾಗುತ್ತಿರುವುದು ಕಂಡು ಬರುತ್ತಿದೆ. ಆದರೂ ಪಿಒಪಿ ಗಣಪತಿ ಮೂರ್ತಿಗಳ ಮಾರಾಟಕ್ಕೆ ಕಡಿವಾಣ ಹಾಕುವ ಅಗತ್ಯವಿದೆ.