

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ನರೇಂದ್ರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 62.28ರಷ್ಟು ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾಗಿದ್ದ 114 ವಿದ್ಯಾರ್ಥಿಗಳಲ್ಲಿ 71 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪೂರ್ಣಿಮಾ ಗಂಟಿ ಶೇ. 97.28 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಚೈತ್ರಾ ಪಾಟೀಲ ಶೇ. 96.16 ದ್ವಿತೀಯ, ಲಕ್ಷ್ಮೀ ತುರಮರಿ ಶೇ. 94.88 ತೃತೀಯ, ಸಂಗೀತಾ ಹುಂಬೇರಿ ಶೇ. 90.24 ಅಂಕ ಪಡೆದು ಚತುರ್ಥ ಸ್ಥಾನ ಪಡೆದಿದ್ದಾಳೆ. ಸಂಜನಾ ಪೂಜಾರ ಶೇ. 82.56, ಬಸಮ್ಮ ಬಳ್ಳೋಡಿ ಶೇ. 82.56, ಗೀತಾ ಹಡಪದ ಶೇ. 82.40, ಕಾವ್ಯಾ ಬಡಿಗೇರ ಶೇ. 82.24, ಕೀರ್ತಿ ಸೋಗಿ ಶೇ. 81.92, ಅನು ಆಯಗಾರ ಶೇ. 79.52, ಸೃಷ್ಟಿ ಅದೇನ್ನಿ ಶೇ. 76.48 ಅಂಕ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಅಭಿನಂದಿಸಿದ್ದಾರೆ.