ಕಳಪೆ ಬಿತ್ತನೆ ಬೀಜ ಮಾರಾಟವಾಗದಿರಲಿ

Kottur Former
ಕೊಟ್ಟೂರಿನಲ್ಲಿ ತಹಸೀಲ್ದಾರ್ ಜಿ.ಕೆ.ಅಮರೇಶಗೆ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಶುಕ್ರವಾರ ಮನವಿ ಸಲ್ಲಿಸಿತು. ರಾಜ್ಯ ಉಪಾಧ್ಯಕ್ಷ ಹೊಸಕೋಡಿಹಳ್ಳಿ ಭರಮಪ್ಪ, ಪ್ರಮುಖರಾದ ಶ್ರೀಧರ, ಕೊಟ್ರೇಶಪ್ಪ, ಅಂಜಿನಪ್ಪ. ಇಮಾಮ್ ಸಾಹೇಬ್ ಇತರರಿದ್ದರು.
Published on

ಕೊಟ್ಟೂರು: ತಾಲೂಕಿನ ಎಲ್ಲ ರಸಗೊಬ್ಬರ ಮಾರಾಟಗಾರರು ಹಾಗೂ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಭೆ ಕೆರೆಯಬೇಕೆಂದು ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಶುಕ್ರವಾರ ತಹಸೀಲ್ದಾರ್ ಜಿ.ಕೆ.ಅಮರೇಶಗೆ ಮನವಿ ಸಲ್ಲಿಸಿತು.

ಸಂಘದ ರಾಜ್ಯ ಉಪಾಧ್ಯಕ್ಷ ಹೊಸಕೋಡಿಹಳ್ಳಿ ಭರಮಪ್ಪ ಮಾತನಾಡಿ, ಕಳಪೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟ ಮಾಡದಂತೆ ಸೂಚನೆ ನೀಡಬೇಕು. ರೈತರಿಗೆ ತಪ್ಪದೆ ರಸೀದಿ ಕೊಡಬೇಕು. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕಳಪೆ ಎಂದು ಕಂಡು ಬಂದಲ್ಲಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಶ್ರೀಧರ, ಕೊಟ್ರೇಶಪ್ಪ, ಅಂಜಿನಪ್ಪ. ಇಮಾಮ್ ಸಾಹೇಬ್, ನಾಗರಾಜಪ್ಪ, ಸುರೇಶ, ಭೀಮಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net