

ಪುತ್ತೂರು ಗ್ರಾಮಾಂತರ : ಪಾಣಾಜೆ ಗ್ರಾಮದ ದೇವಸ್ಯ ಉದಯ ಕುಮಾರ್ ಮಣಿಯಾಣಿ ಅವರ ಮನೆಯ ಮೇಲ್ಛಾವಣಿಯು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ವಾಸ್ತವ್ಯಕ್ಕೆ ಯೋಗ್ಯವಲ್ಲದ ಈ ಮನೆಯ ದುರಸ್ತಿ ಕಾರ್ಯವನ್ನು ಅಟಲ್‌ಜೀ ಜನ್ಮ ಶತಾಬ್ದಿಯ ಪ್ರಯುಕ್ತ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಮಾಡುವುದೆಂಬ ಸಂಕಲ್ಪ ಕೈಗೊಳ್ಳಲಾಯಿತು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ಕೋಡಿಬೈಲು, ನೆಕ್ಕಿಲಾಡಿ ಗ್ರಾಪಂ ಮಾಜಿ ಅಧ್ಯಕ್ಷ ಪ್ರಶಾಂತ್ ನೆಕ್ಕಿಲಾಡಿ, ಬಿಜೆಪಿ ಮಂಡಲ ಎಸ್‌ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುಜಿತ್ ಕಜೆ, ಪಾಣಾಜೆ ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕ ಪ್ರೇಮ್‌ರಾಜ್ ಆರ್ಲಪದವು, ಬಿಜೆಪಿ ಮಂಡಲ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರದೀಪ್ ಪಾಣಾಜೆ, ಪಾಣಾಜೆ ಬಿಜೆಪಿ ಬೂತ್ ಪ್ರಮುಖರಾದ ಪುಷ್ಪರಾಜ ರೈ ಕೋಟೆ, ಸಂದೀಪ್ ಕೆ., ಕೀರ್ತಿರಾಜ್ ಉಡ್ಡಂಗಳ, ಪಾಣಾಜೆ ಕೃಷಿ ಪತ್ತಿನ ಸಹಾಕಾರಿ ಸಂಘದ ನಿರ್ದೇಶಕ ಹರೀಶ್ ಕಡಮಾಜೆ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸದಸ್ಯರಾದ ವಸಂತ ಕುಮಾರ್ ಭರಣ್ಯ, ಸುಖಿನ್ ರಾಜ್ ಪಾಣಾಜೆ, ಜಾನು ನಾಯ್ಕ ಭರಣ್ಯ ಮತ್ತಿತರರು ಉಪಸ್ಥಿತರಿದ್ದರು.