ಶಾಲೆಗೆ ಕಳಪೆ ಕಂಪ್ಯೂಟರ್‌ಗಳ ಪೂರೈಕೆ

hb halli Computer
ಹಗರಿಬೊಮ್ಮನಹಳ್ಳಿಯಲ್ಲಿ ಬಿಇಒ ಕಚೇರಿ ವ್ಯವಸ್ಥಾಪಕ ಗಿರೀಶ್‌ಗೆ ಕೋಗಳಿ ತಾಂಡಾದ ಜಯ ಕರ್ನಾಟಕ ಸಂಘಟನೆ ಮುಖಂಡರು ಮನವಿ ಸಲ್ಲಿಸಿದರು. ಸಂಘಟನೆಯ ಅಧ್ಯಕ್ಷ ಪ್ರಕಾಶ್ ನಾಯ್ಕ, ಅರುಣ್ ಕುಮಾರ್, ಕೃಷ್ಣನಾಯ್ಕ, ಜಾಡದುರ್ಗಪ್ಪ ಇದ್ದರು.
Published on

ಹಗರಿಬೊಮ್ಮನಹಳ್ಳಿ: ತಾಲೂಕಿನ ಕೋಗಳಿ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀಡಿರುವ ಕಂಪ್ಯೂಟರ್‌ಗಳು ಕಳಪೆಯಿಂದ ಕೂಡಿದ್ದು, ಅಳವಡಿಸಬಾರದೆಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಬಿಇಒಗೆ ಮನವಿ ಸಲ್ಲಿಸಿದರು.

ಸಂಘಟನೆಯ ಗ್ರಾಮ ಘಟಕ ಅಧ್ಯಕ್ಷ ಪ್ರಕಾಶನಾಯ್ಕ ಮಾತನಾಡಿ, ಶಾಲೆಗಾಗಿ 40 ಲಕ್ಷ ರೂ.ಗೂ ಅಧಿಕ ಮೊತ್ತದ ಕಂಪ್ಯೂಟರ್ ಎಸ್ಟಿಮೇಟ್ ಮಾಡಲಾಗಿದೆ. ಆದರೆ, ನೀಡಿರುವ ಕಂಪ್ಯೂಟರ್‌ಗಳು ಕಳಪೆಯಾಗಿವೆ. ಇದರಿಂದ ಮಕ್ಕಳಿಗೆ ಅನುಕೂಲವಾಗುವುದಿಲ್ಲ. ಅಲ್ಲದೆ ಸುರಕ್ಷಿತವಲ್ಲದ ಸ್ಥಳದಲ್ಲಿ ಗಣಕಯಂತ್ರಗಳನ್ನು ಅಳವಡಿಸಲಾಗುತ್ತಿದೆ.

ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಕಂಪ್ಯೂಟರ್‌ಗಳ ಹಸ್ತಾಂತರ ಮತ್ತು ಒಪ್ಪಿಗೆ ಪತ್ರವನ್ನು ನೀಡಬಾರದೆಂದು ಒತ್ತಾಯಿಸಿದರು. ಗ್ರಾಮ ಘಟಕದ ಸಂಘಟನಾ ಕಾರ್ಯದರ್ಶಿ ಜಾಡ ದುರ್ಗಪ್ಪ, ಚಿಂತ್ರಪಳ್ಳಿ ಮಂಜು, ಕೈಲಾಸ್ ಕತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net