ಬಡವರಿಗೆ ನಿವೇಶನ, ವಸತಿ ಸೌಕರ್ಯ ಕಲ್ಪಿಸಿ, ಹಬೊಹಳ್ಳಿ ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ಒತ್ತಾಯ

020320 HB Halli Rural Wage Labors Appeal to S Bheemanayak
Published on

ಹಗರಿಬೊಮ್ಮನಹಳ್ಳಿ: ವಸತಿ ರಹಿತರಿಗೆ ನಿವೇಶನ ಹಾಗೂ ವಸತಿ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಶಾಸಕ ಎಸ್.ಭೀಮಾನಾಯ್ಕಗೆ ತಾಲೂಕು ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ಪದಾಧಿಕಾರಿಗಳು ಭಾನುವಾರ ಮನವಿ ಸಲ್ಲಿಸಿದರು.

ತಾಲೂಕು ಸಂಚಾಲಕಿ ಅಕ್ಕಮಹಾದೇವಿ ಮಾತನಾಡಿ, ಸಾಕಷ್ಟು ಬಡ ಕುಟುಂಬಗಳು ಸರ್ಕಾರಿ ಪಾಳು ಭೂಮಿಗಳಲ್ಲಿ ಹಲವು ವರ್ಷಗಳಿಂದ ಬಗರ್‌ಹುಕುಂ ಸಾಗುವಳಿ ಮಾಡುತ್ತಿದ್ದಾರೆ. ಮನೆ ಗುಡಿಸಲು ಕಟ್ಟಿಕೊಂಡಿದ್ದಾರೆ. ಹಿಂದಿನ ಸರ್ಕಾರಗಳು ಹಕ್ಕುಪತ್ರ ನೀಡಲು ಫಾರ್ಮ್ ನಂ.50, 53, 57 ಹಾಗೂ ಮನೆಗಳಿಗಾಗಿ 94ಸಿ, 94ಸಿಸಿ, ಅಕ್ರಮ ಸಕ್ರಮದಂತ ಯೋಜನೆ ರೂಪಿಸಿ ಅರ್ಜಿ ಸ್ವೀಕರಿಸಿತ್ತು. ಆದರೆ, ಈವರೆಗೆ ಒಬ್ಬರಿಗೂ ಜಮೀನು, ಮನೆ ಹಂಚಿಕೆ ಮಾಡಿಲ್ಲ. ನಾಲ್ಕೈದು ದಶಕಗಳಿಂದ ವಿವಿಧ ಸಂಘಟನೆಗಳು ಹೋರಾಟ ನಡೆಸುತ್ತಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಾಸಕ ಎಸ್.ಭೀಮಾನಾಯ್ಕ ಪ್ರತಿಕ್ರಿಯಿಸಿ, ಶೀಘ್ರವೇ ಭೂ ಮಂಜೂರಾತಿ ಸಮಿತಿ ರಚಿಸಿ ಭೂಮಿ ಮತ್ತು ವಸತಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸಂಘದ ತಾಲೂಕು ಸಂಚಾಲಕ ಕೋಗಳಿ ಮಲ್ಲೇಶ್, ಹನುಮಂತ, ವಿಠಲ್, ಹರೇಗೊಂಡನಹಳ್ಳಿ ಕೊಟ್ರೇಶ್, ನಾಗರಾಜ್, ದೇವಪ್ಪ, ತ್ರಿವೇಣಿ, ಕಾಸೀಂಸಾಬ್, ಕರಿಬಸಪ್ಪ, ಗಂಗಮ್ಮ, ಶಾಂತಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net