ಆ.20ರಂದು ನಗರದಲ್ಲಿ ಪೂಲನ್‌ದೇವಿ ನಾಟಕ ಪ್ರದರ್ಶನ: ಸಾರ್ವಜನಿಕರಿಗೆ ಉಚಿತ ಪ್ರವೇಶ

1
Published on

ಮಂಡ್ಯ: ನೆಲದನಿ ಬಳಗವು ನಗರದಲ್ಲಿ ಆ.20ರಂದು ಪೂಲನ್‌ದೇವಿ ಅವರ ಜೀವನಧಾರಿತ ಪೂಲನ್‌ದೇವಿ ನಾಟಕ ಪ್ರದರ್ಶನ ಆಯೋಜಿಸಿದೆ.

ಎಸ್.ಡಿ.ಜಯರಾಮ್ ಅವರ 73ನೇ ವರ್ಷದ ಹುಟ್ಟುಹಬ್ಬ ಅಂಗವಾಗಿ ಆಯೋಜಿಸಿರುವ ಈ ನಾಟಕವು ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಅಂದು ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ. ಬೆಂಗಳೂರಿನ ರಂಗಪಯಣ ತಂಡದ ಕಲಾವಿದರು ರಂಗದ ಮೇಲೆ ನಾಟಕವನ್ನು ಪ್ರದರ್ಶಿಸುವರು. ಸಾರ್ವಜನಿಕರಿಂದ ಪ್ರವೇಶ ಉಚಿತವಾಗಿದೆ.

ರಂಗಭೂಮಿ ನಿರ್ದೇಶಕ ರಾಜ್‌ಗುರು ಅವರು ನಾಟಕವನ್ನು ಪೂಲನ್‌ದೇವಿ ಅವರ ಜೀವನವನ್ನು ರಂಗರೂಪಕ್ಕಿಳಿಸಿ, ನಿರ್ದೇಶನ ಮಾಡಿದ್ದಾರೆ. ಜತೆಗೆ, ನಾಟಕ ವಿನ್ಯಾಸ ಮತ್ತು ಸಂಗೀತದ ಹೊಣೆಗಾರಿಕೆಯನ್ನೂ ಹೊತ್ತಿದ್ದಾರೆ. ಎಂ.ಜಿ.ನವೀನ್ ಬೆಳಕಿನ ಸಂಯೋಜನೆ ಮಾಡಿದ್ದು, ಜಯರಾಜ್ ಹುಸ್ಕೂರ್ ಅವರ ಪ್ರಸಾದನ ಮತ್ತು ನಯನ ಸೂಡ ಅವರ ನಿರ್ವಹಣೆ ಈ ನಾಟಕಕ್ಕಿದೆ. ರಂಗನಟಿ ನಯನ ಸೂಡ ಅವರು ಪೂಲನ್ ದೇವಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net