

ಸುಂಟಿಕೊಪ್ಪ: ನಾಕೂರು-ಶಿರಂಗಾಲ ಪಂಚಾಯಿತಿ ವ್ಯಾಪ್ತಿಯ ಹಿಂದು ಮಲಯಾಳಿ ಸಮಾಜದ ವತಿಯಿಂದ 3ನೇ ವರ್ಷದ ಓಣಂ ಆಚರಣೆ ಅಂಗವಾಗಿ ಅ.12ರಂದು ಮೆರವಣಿಗೆ, ಪೂಕಳಂ, ಮಕ್ಕಳಿಗೆ ಡಾನ್ಸ್ ಸ್ಪರ್ಧೆ, ಓಣಂ ನಡೆಯಲಿದೆ.
ಅಂದು ಬೆಳಗ್ಗೆ 9 ಗಂಟೆಗೆ ಕಲ್ಲೂರು ಬಸವೇಶ್ವರ ದೇವಸ್ಥಾನದಿಂದ ಚಂಡೆ ಮೇಳದೊಂದಿಗೆ ಮೆರವಣಿಗೆ ಆರಂಭವಾಗಲಿದ್ದು, ಸಮಾಜದ ಅಧ್ಯಕ್ಷ ಕೆ.ಜಿ.ರಾಜ, ಗ್ರಾ.ಪಂ.ಸದಸ್ಯೆ ರಾಧಾಮಣಿ ಚಾಲನೆ ನೀಡಲಿದ್ದಾರೆ. ಕಾನ್‌ಬೈಲ್ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಯೋಜಿಸಿರುವ ಸಭಾ ಕಾರ್ಯಕ್ರಮವನ್ನು ಅಂದು ಬೆಳಗ್ಗೆ 11 ಗಂಟೆಗೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದಾರೆ.
ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಅಧ್ಯಕ್ಷತೆ ವಹಿಸಲಿದ್ದು, ಹಲವು ಗಣ್ಯರು ಆಗಮಿಸಲಿದ್ದಾರೆ. ಓಣಂ ದಿನಾಚರಣೆ ಅಂಗವಾಗಿ ಪೂಕಳಂ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಪ್ರಥಮ ಬಹುಮಾನ 5,000ರೂ.,4,000 ರೂ.ದ್ವಿತೀಯ, 3,000 ರೂ. ತೃತೀಯ ಸ್ಥಾನ ಪಡೆದವರಿಗೆ ನೀಡಲಾಗುವುದು. ನಂತರ ಓಣಂ ಸದ್ಯ ಹಾಗೂ ಇತರ ಕ್ರೀಡೆಗಳು ನಡೆಯಲಿದೆ ಎಂದು ಸಮಾಜದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.