

ಬೇಲೂರು: ತಾಲೂಕಿನ ಅರೇಹಳ್ಳಿ ಸಮೀಪದ ವಾಟೇಹಳ್ಳಿ-ಹೊಸಮನೆ ಗ್ರಾಮದಲ್ಲಿರುವ ಶ್ರೀ ಚೌಡಮ್ಮ ದೇವಿ ದೇವಸ್ಥಾನದಲ್ಲಿ ಗುರುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಪೂಜೋತ್ಸವ ನೆರವೇರಿತು.
ದೇಗುಲ ಅಭಿವೃದ್ಧಿ ಟ್ರಸ್ಟ್ ಹಾಗೂ ಉತ್ಸವ ಸಮಿತಿಯಿಂದ ನವರಾತ್ರಿ ಪೂಜೋತ್ಸವ ಅಂಗವಾಗಿ ನಿತ್ಯ ದೇವಿಗೆ ಸಿಂಗಾರ, ಚಿನ್ನಾಭರಣಗಳ ಅಲಂಕಾರ, ಪಂಚಾಮೃತ ಅಭಿಷೇಕದೊಂದಿಗೆ ದೇವಿಗೆ ಪೂಜೆ ನೆರವೇರಿಸಲಾಗುತ್ತಿತ್ತು. ಕೊನೆಯ ದಿನ ಗಣಪತಿ ಹೋಮ, ಗಂಗಾ ಹೋಮ, ಗಣ ಹೋಮ, ಕಲಾಭಿವೃದ್ಧಿ ಹೋಮವನ್ನು ಅರ್ಚಕರು ನೆರವೇರಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಶಾಂತಿ ಹಾಗೂ ನೆಮ್ಮದಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪೂಜೆಯಲ್ಲಿ ಭಾಗವಹಿಸಿ ದೇವಿಯ ಆಶೀರ್ವಾದ ಪಡೆದರು.
ಚೌಡಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಟ್ಟಸ್ಟ್ ಅಧ್ಯಕ್ಷ ಮಂಜುನಾಥ್‌ಶೆಟ್ಟಿ, ಉತ್ಸವ ಸಮಿತಿ ಅಧ್ಯಕ್ಷ ಆನಂದಶೆಟ್ಟಿ, ಟ್ರಸ್ಟ್ ಖಜಾಂಚಿ ಲಕ್ಷ್ಮಣ್‌ರಾಜ್ ಅರಸ್, ಉತ್ಸವ ಸಮಿತಿ ಮಾಜಿ ಅಧ್ಯಕ್ಷ ಅಶೋಕ್‌ರಾಜ್ ಅರಸ್, ಸಮಿತಿಯ ದೇವರಾಜ್ ಅರಸ್, ರಜನೀಶ್ ಅರಸ್, ಧನರಾಜ್ ಅರಸ್, ಸುರೇಶ್ ರಾಜ್ ಅರಸ್, ಮಹೇಶ್‌ಶೆಟ್ಟಿ, ಶಾಂತರಾಜ್‌ಶೆಟ್ಟಿ ಸೇರಿದಂತೆ ಇತರರಿದ್ದರು.