

ಮಡಿಕೇರಿ:
ಚೆಟ್ಟಳ್ಳಿ ಕಾಫಿ ಬೋರ್ಡ್ನಲ್ಲಿರುವ ಶ್ರೀ ಶಕ್ತಿ ಗಣಪತಿ ದೇವಾಲಯದ ಬೆಳ್ಳಿ ಮಹೋತ್ಸವ ಮತ್ತು ದೇವಾಲಯ ನವೀಕರಣ ಅಷ್ಟಬಂಧ ಬ್ರಹ್ಮ ಕಲಶಾಭಿಷೇಕ ಕಾರ್ಯಕ್ರಮಗಳು ಮಾ. 29 ಮತ್ತು 30 ರಂದು ನಡೆಯಲಿದೆ. ಎರಡು ದಿನಗಳ ಕಾಲ ಕೇರಳದ ಬ್ರಹ್ಮರ್ಷಿ ವೇದಮೂರ್ತಿ ಶಿವಸುಬ್ರಹ್ಮಣ್ಯ ಭಟ್ಟ ಶುಳುವಾಲಮೂಲೆ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಲಿದ್ದು, ಮಾ. 29 ರಂದು ಶನಿವಾರ ಬೆಳಗ್ಗೆ 9 ಗಂಟೆಗೆ ಸಪ್ತುಶುದ್ದಿ ಪುಣ್ಯಕ್ಷದೇವತಾ ಪ್ರಾರ್ಥನೆ, ಆಚಾರ್ಯ ಪಠಣ, ಪ್ರಸಾದಶುದ್ದಿ, ಅನುಜ್ಞ ಕಳಶ. ಕಳಶ ಪ್ರತಿಷ್ಠೆ, ವೇದಪಾರಾಯಾಣ ನಡೆಯಲಿದೆ. ಮಧ್ಯಾಹ್ನ 12.30 ಗಂಟೆಗೆ ಮಹಾಮಂಗಳಾರತಿ, ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಇರುತ್ತದೆ. ಸಂಜೆ 5 ಗಂಟೆಗೆ ಶ್ರೀ ಲಕ್ಷ್ಮಿಸಹಿತ ಶ್ರೀ ಸತ್ಯನಾರಾಯಣ ಪೂಜೆ, ರಕ್ತೋಘ್ನ ಹವನ, ವಾಸ್ತು ಪೂಜೆ, ವಾಸ್ತು ಬಲಿ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಇರುತ್ತದೆ.
ಮಾ. 30 ರಂದು ಭಾನುವಾರ ಬೆಳಗ್ಗೆ 6 ಗಂಟೆಯಿAದ 48 ತೆಂಗಿನಕಾಯಿ ಅಷ್ಟದ್ರವ್ಯದಿಂದ ಗಣಪತಿ ಹವನ, ಗಣಪತಿ ಅಥರ್ವ ಶೀರ್ಷ ಹವನ, ಬಿಂಬ ಸಾನಿಧ್ಯ ಹವನ, ಬೆಳಗ್ಗೆ 9 ಗಂಟೆಗೆ ಪೂರ್ಣಾಹುತಿ, 9.40 ಗಂಟೆ ನಂತರ ವೃಷಭ ಲಗ್ನದಲ್ಲಿ ಗಣಪತಿಗೆ ಕಲಶಾಭಿಷೇಕ, ನಂತರ ನಾಗದೇವರಿಗೆ ಕಳಶಾಭಿಷೇಕ, ಕಷೋಕ್ತ ಪೂಜೆ, ಮಂಗಳಾರತಿ, ಪ್ರಸಾದ, ಮಂತ್ರಾಕ್ಷತೆ, ಅನ್ನಸಂತರ್ಪಣೆ ಏಪ9ಡಿಸಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಸ್. ಮಹೇಶ್ ಮತ್ತು ಕಾರ್ಯದರ್ಶಿ ಅಪ್ಪುಕುಟ್ಟನ್ ಮಾಹಿತಿ ನೀಡಿದ್ದಾರೆ.