ಚೇರಂಗಾಲ ದೇವಾಲಯದಲ್ಲಿ ವಿಶೇಷ ಪೂಜೆ

pooje
Published on

ಭಾಗಮಂಡಲ:

ಇಲ್ಲಿಗೆ ಸಮೀಪದ ಚೇರಂಗಾಲ ಗ್ರಾಮದ ಶ್ರೀ ಈಶ್ವರ ಭಗವತಿ ದೇವಾಲಯದಲ್ಲಿ ವಾರ್ಷಿಕ ಪೂಜೆ ಶುಕ್ರವಾರ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರಿಂದ ಸಾಂಪ್ರದಾಯಿಕ ಕೋಲಾಟ ನಡೆಯಿತು.

ಬಳಿಕ ದೇವಾಲಯದಲ್ಲಿ ವಿಶೇಷ ಮಹಾಪೂಜೆ ಏರ್ಪಡಿಸಲಾಗಿತ್ತು. ರವಿ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯ ನಡೆಯಿತು. ತಕ್ಕಮುಖ್ಯಸ್ಥ ಸಿರಕಜೆ ಸುಂದರ ನೇತೃತ್ವದಲ್ಲಿ ಕೋಲಾಟ ನಡೆದ ಬಳಿಕ ಭಾಗಮಂಡಲದ ಶ್ರೀ ಕಾವೇರಿ ಆಟೋ ಚಾಲಕರ ಸಂಘದ ಸದಸ್ಯರಿಂದ ಅನ್ನ ಸಮರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಮಸ್ಥರು, ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ದೇವಾಲಯ ಸಮಿತಿ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಕಾರ್ಯದರ್ಶಿ ಮತ್ತಾರಿ ರಾಜ, ಗ್ರಾಮ ಪಂಚಾಯತಿ ಸದಸ್ಯ ಸಿರಕಜೆ ನಾಗೇಶ್, ಶ್ರೀ ಕಾವೇರಿ ಆಟೋ ಚಾಲಕರ ಸಂಘದ ಸದಸ್ಯರಾದ ಶಿರಕಜೆ ಟಿ. ಭವನ್ ಕುಮರ್, ಕುಂಬನ ರವೀಂದ್ರ ಮೂಲೆಮಜುಲು ಸುದಿ, ಪರಿವಾರ ಸಂತೋಷ್, ಶಿರಕಜೆ ತನುರಾಜ್, ಶಿರಕಜೆ ಪವನ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net