

ಕುಶಾಲನಗರ:
ಕುಶಾಲನಗರ ತಾಲೂಕು ನಂಜರಾಯಪಟ್ಟಣ ಗ್ರಾಮದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ 18ನೇ ವರ್ಷದ ಚಾಮುಂಡೇಶ್ವರಿ ದೇವಿ ಕ್ಷೇತ್ರದ ವಾರ್ಷಿಕೋತ್ಸವ ಶ್ರಧ್ಧಾಭಕ್ತಿಯಿಂದ ಶನಿವಾರ ನಡೆಯಿತು. ವಿವಿಧ ಹೋಮ, ಹವನ ಸೇರಿದಂತೆ ವಿದಿ-ವಿಧಾನಗಳು, ಪೂಜಾ ಕೈಂಕರ್ಯಗಳು ನಡೆದವು.
ವಾರ್ಷಿಕೋತ್ಸವದ ಅಂಗವಾಗಿ ದುಗಾಪೂಜೆ, ಪೂಣ್ಯಾಹಶುದ್ಧಿ , ಗಣಪತಿ ಹೋಮ, ನವಕ, ಕಳಸ ಪೂಜೆ, ಕಲಶಾಭಿಷಕ, ಮಹಾಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಚಾಮುಂಡೇಶ್ವರಿ ದೇವಾಲಯ ಆವರಣದಲ್ಲಿ ನಡೆದವು.
ಪೂಜಾ ಕೈಂಕರ್ಯಗಳನ್ನು ವಿರಾಜಪೇಟೆ ಜಿ.ಕೆ. ನಂಬೂದರಿ ತಂಡದವರು ನೆರವೇರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರಿಗೆ ದೇವಸ್ಥಾನ ಸಮಿತಿ ವತಿಯಿಂದ ಅನ್ನಸಂರ್ತಪಣೆ ಕಾರ್ಯಕ್ರಮವು ನಡೆಯಿತು. ವಾರ್ಷಿಕೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ನಂಜರಾಯಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು.