ಸಿಎಂ ಸಂಕಷ್ಟ ನಿವಾರಣೆಗೆ ಪೂಜೆ

TKE pooja
ತರೀಕೆರೆ ಶ್ರೀಗುರು ರೇವಣಸಿದ್ದೇಶ್ವರ ಸ್ವಾಮಿ ದೇಗುಲದಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಶಾಸಕ ಜಿ.ಎಚ್.ಶ್ರೀನಿವಾಸ್, ವಸಂತ್‌ಕುಮಾರ್, ಟಿ.ಎಸ್.ಧರ್ಮರಾಜ್, ಟಿ.ಎಸ್.ಪ್ರಕಾಶ್ ವರ್ಮ, ಟಿ.ಎನ್.ಜಗದೀಶ್, ಬಿ.ಎಂ.ಮರುಗೇಶಪ್ಪ ಇತರರಿದ್ದರು.
Published on

ತರೀಕೆರೆ: ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮಾಡಿರುವ ಸುಳ್ಳು ಆರೋಪದಿಂದ ಎದುರಾಗಿರುವ ಸಂಕಷ್ಟ ದೂರವಾಗಲಿ ಎಂದು ಪ್ರಾರ್ಥಿಸಿ ಎಸ್.ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಮಂಗಳವಾರ ಶಾಸಕ ಜಿ.ಎಚ್.ಶ್ರೀನಿವಾಸ್ ನೇತೃತ್ವದಲ್ಲಿ ಪಟ್ಟಣದ ಶ್ರೀಗುರು ರೇವಣಸಿದ್ದೇಶ್ವರ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಪ್ರಾಮಾಣಿಕ ವ್ಯಕ್ತಿತ್ವ, ದಕ್ಷ ಆಡಳಿತಗಾರ ಸಿದ್ದರಾಮಯ್ಯ ಅವರ ವಿರುದ್ಧ ವಿಪಕ್ಷಗಳು ಸಲ್ಲದ ಆರೋಪ ಮಾಡಿ ನೈತಿಕ ಬಲ ಕುಗ್ಗಿಸುವ ಕೆಲಸ ಮಾಡುತ್ತಿವೆ. ಅವರ ಜನಪ್ರಿಯತೆ ಕುಗ್ಗಿಸುವ ಸಲುವಾಗಿ ರೂಪಿಸಿರುವ ಷಡ್ಯಂತ್ರ ರಾಜ್ಯದ ಜನರಿಗೆ ಗೊತ್ತಾಗಿದೆ. ಅದೇನೇ ಆದರೂ ದೇವರ ದಯೆಯಿಂದ ಸದ್ಯದಲ್ಲೇ ಆರೋಪಮುಕ್ತರಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್, ಮಾಜಿ ಅಧ್ಯಕ್ಷರಾದ ಟಿ.ಎಸ್.ಧರ್ಮರಾಜ್, ಟಿ.ಎಸ್.ಪ್ರಕಾಶ್ ವರ್ಮ, ಪ್ರಮುಖರಾದ ಬಿ.ಎಂ.ಮರುಗೇಶಪ್ಪ, ಟಿ.ಎನ್.ಜಗದೀಶ್, ಟಿ.ಜಿ.ಮಂಜುನಾಥ್, ಕೆಂಪ ರಂಗಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net