ಜು.26ರಿಂದ 30ರವರೆಗೆ ಪೂಜಾ ಮಹೋತ್ಸವ: ದೇವಾಲಯದ ಸೇವಾ ಸಮಿತಿ ಅಧ್ಯಕ್ಷ ಶಂಕರ್ ಹೇಳಿಕೆ

Pooja Mahotsav at Balasubrahmanyeswaraswamy Temple Mandya
Published on

ಮಂಡ್ಯ: ನಗರದ ರೈಲ್ವೆ ನಿಲ್ದಾಣ ಬಳಿಯ ಬಾಲಸುಬ್ರಹ್ಮಣ್ಯೇಶ್ವರಸ್ವಾಮಿ ದೇವಾಲಯದಲ್ಲಿ ಜು.26ರಿಂದ 30ರವರೆಗೆ ಪೂಜಾ ಮಹೋತ್ಸವ ಆಯೋಜಿಸಲಾಗಿದೆ ಎಂದು ದೇವಾಲಯದ ಸೇವಾ ಸಮಿತಿ ಅಧ್ಯಕ್ಷ ಶಂಕರ್ ತಿಳಿಸಿದರು.

ಆಷಾಢ ಮಾಸ ಹಿನ್ನೆಲೆಯಲ್ಲಿ ಪೂಜಾ ಮಹೋತ್ಸವ ಸಂಘಟಿಸಲಾಗಿದೆ. ನಾಲ್ಕು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ವಿವಿಧ ಕಾರ್ಯಕ್ರಮ, ಹೋಮ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

26ರಂದು ಬೆಳಗ್ಗೆ 7.30ಕ್ಕೆ ಮಹಾಗಣಪತಿ ಪೂಜೆ, 9ಕ್ಕೆ ಸುಬ್ರಹ್ಮಣ್ಯ, ಗಣಪತಿ ಮತ್ತು ಮಾರಮ್ಮ ದೇವರಿಗೆ ಪಂಚಾಮೃತ ಅಭಿಷೇಕ, 9.30ರಿಂದ ಮಧ್ಯಾಹ್ನ 12ರವರೆಗೆ ಚಂಡಿಕಾ ಹೋಮ, ಪೂರ್ಣಾಹುತಿ ಮತ್ತು ಮಹಾಮಂಗಳಾರತಿ ನಡೆಯಲಿದೆ. 28ರಂದು ಸಂಜೆ 7ರಿಂದ 8ರವರೆಗೆ ದುರ್ಗಾ ಹೋಮ, 29ರಂದು ಸಂಜೆ 7ರಿಂದ 8ರವರೆಗೆ ನವಗ್ರಹ ಹೋಮ, ಮೃತ್ಯುಂಜಯ ಹೋಮ ನಡೆಸಲಾಗುತ್ತದೆ ಎಂದರು.

29ರಂದು ಸಂಜೆ 7ಕ್ಕೆ ಸ್ಕಂದ ಹೋಮ(ಸುಬ್ರಹ್ಮಣ್ಯ ಹೋಮ), 30ರಂದು ಬೆಳಗ್ಗೆ 6.30ರಿಂದ 10 ಗಂಟೆವರೆಗೆ ಬಾಲ ಸುಬ್ರಹ್ಮಣ್ಯೇಶ್ವರಸ್ವಾಮಿಗೆ ಫಲಪಂಚಾಮೃತಾಭಿಷೇಕ ಸಹಿತ ಮಹಾಪೂಜೆ ಏರ್ಪಡಿಸಲಾಗಿದೆ. ಭಕ್ತರು ಧವಸ-ಧಾನ್ಯ ಹಾಗೂ ಹಣ ನೀಡಬಹುದು ಎಂದು ಮನವಿ ಮಾಡಿದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಕಣಿವೇಲ್, ಪದಾಧಿಕಾರಿಗಳಾದ ಆರ‌್ಮುಗಂ, ವಾಸು, ಅರ್ಜುನ್, ನಾರಾಯಣ, ಚಲುವರಾಜು, ಮಂಜು, ಕುಪ್ಪುರಾಜ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net