

ಹಿರಿಯೂರು: ನಗರದ ಇತಿಹಾಸ ಪ್ರಸಿದ್ಧ ಗೌರಸಮುದ್ರ ಮಾರಮ್ಮ ದೇವಿ ಜಾತ್ರೋತ್ಸವ ಹಾಗೂ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಶ್ರದ್ಧಾ-ಭಕ್ತಿಯಿಂದ ನೆರವೇರಿದವು.
ಬುಧವಾರ ಬೆಳಗ್ಗೆ ಗಂಗಾ ಪೂಜೆ-ಕಳಸಾ ಪ್ರತಿಷ್ಠಾಪನೆ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ಹಸಿರು ತೋರಣ, ಕಳಸಾ ಪೂಜೆ, ಕುಂಬಳ ಕಾಯಿ ಒಡೆದ ಬಳಿಕ ದೇವಿಯ ಉತ್ಸವ ಆರಂಭವಾಯಿತು.
ದೇವಸ್ಥಾನದ ಆವರಣದಲ್ಲಿ ಗಂಗಾಪೂಜೆ, ಹೋಮ-ಹವನ, ದೇವಿಗೆ ಮಾಂಗಲ್ಯಧಾರಣೆ, ನೈವೇದ್ಯ, ಆರತಿ ಸೇವೆ ಇತರೆ ಧಾರ್ಮಿಕ ಕಾರ್ಯಗಳು ಜರುಗಿದವು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಕಾರ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕಾಂಗ್ರೆಸ್ ಮುಖಂಡ ಜಿ.ಎಸ್.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಜಾತ್ರೋತ್ಸವದಲ್ಲಿ ಭಾಗವಹಿಸಿ, ಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.