ಗಣಪತಿ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ

15 SARAG 4
ಸರಗೂರು ಪಟ್ಟಣದ ಮಹಾವೀರ ಸರ್ಕಲ್ ಬಳಿಯಿರುವ ಗಣಪತಿ ದೇವಸ್ಥಾನದ ವಾರ್ಷಿಕ ಪೂಜೆ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ಶಿವಲಿಂಗಶಟ್ಟರು, ನಂಜುಂಡಶಟ್ಟಿ, ವೆಂಕಟರಾಮು, ಮಹಾದೇವ, ಕೆಂಡಗಣ್ಣ, ನಾಗರಾಜು ಇದ್ದರು.
Published on

ಸರಗೂರು: ಪಟ್ಟಣದ ಮಹಾವೀರ ಸರ್ಕಲ್ ಬಳಿ ಗಾಣಿಗ ಸಮುದಾಯ ಸೇವಾ ಟ್ರಸ್ಟ್ ವತಿಯಿಂದ ನಿರ್ಮಾಣ ಮಾಡಿರುವ ಗಣಪತಿ ದೇವಸ್ಥಾನದ 3ನೇ ವರ್ಷದ ವಾರ್ಷಿಕೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.

ದೇವಸ್ಥಾನದಲ್ಲಿ ಬೆಳಗ್ಗೆ ಪಲ್ಲಕ್ಕಿ ಉತ್ಸವ, ಅಲಂಕಾರ ಪೂಜೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮ ನಡೆಯಿತು. ರಾಜಬೀದಿ ಗಳಲ್ಲಿ ಗಣಪತಿ ಭಾವಚಿತ್ರದ ಮೆರವಣಿಗೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು.

ಗಾಣಿಗ ಸಮಾಜದ ಅಧ್ಯಕ್ಷ ಶಿವಲಿಂಗಶಟ್ಟರು ಮಾತನಾಡಿ, ಇದನ್ನು ಪವಾಡ ದೇವಾಲಯವೆಂದರೆ ತಪ್ಪಾಗಲಾರದು. ನಂಬಿ ಬಂದ ಭಕ್ತರಿಗೆ ಸದಾ ನೆರಳಾಗಿ ನಿಲ್ಲುವ ಈ ದೇವಾಲಯದಲ್ಲಿ ವಿಶೇಷತೆ ನಡೆಯಲಿದೆ ಎಂದು ತಿಳಿಸಿದರು.

ಗಾಣಿಗ ಸಮುದಾಯ ಸೇವಾ ಟ್ರಸ್ಟ್ ಉಪಾಧ್ಯಕ್ಷ ನಂಜುಂಡಶಟ್ಟಿ, ಕಾರ್ಯದರ್ಶಿ ವೆಂಕಟರಾಮು, ಎನ್.ಮಹಾದೇವ, ಕೆಂಡಗಣ್ಣ, ನಾಗರಾಜು ಎಸ್.ನಾಯಕ, ಯಜಮಾನರಾದ ಬೆಟ್ಟನಾಯಕ, ಈಡಿಗ ಸಮಾಜದ ಯಜಮಾನರಾದ ಕರಿಯಪ್ಪ, ದಿನೇಶ್, ಸಿ. ಬಸವರಾಜು, ವಾಹನ ಚಾಲಕರ ಸಂಘದ ಕಾರ್ಯದರ್ಶಿ ಚಾಮರಾಜು, ಗುತ್ತಿಗೆದಾರ ಬಸವರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net