

ಮಡಿಕೇರಿ:
ಮಡಿಕೇರಿ ತಾಲೂಕು ಕುಂದಚೆರಿ ಗ್ರಾಮದ ನಾಗರಿಕ ಸೇವಾ ಸಮಿತಿ ಪೂವ್ವಲಮಾನಿ ಇವರ ಆಶ್ರಯದಲ್ಲಿ ಗುರುವಾರ ನಡೆದ 3ನೇ ವರ್ಷದ ಶಾರದಾ ಪೂಜೆ ಹಾಗೂ ಕಿರು ಕ್ರೀಡಾಕೂಟಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಭೇಟಿ ನೀಡಿದರು.
ಕಾರ್ಯಕ್ರಮಕ್ಕೂ ಮೊದಲು ಕುಂದಚೇರಿಯ ಇತಿಹಾಸ ಪ್ರಸಿದ್ಧ ಕಲ್ಲುತಿರಿಕೆ ಕಲ್ಲೂರಪ್ಪ ದೇವಸ್ಥಾನಕ್ಕೆ ತೆರಳಿದ ಶಾಸಕರು ಪೂಜೆ ಸಲ್ಲಿಸಿದರು. ಬಳಿಕ ಕಿರು ಕ್ರೀಡಾಕೂಟ ಮೈದಾನಕ್ಕೆ ಆಗಮಿಸಿ ಕ್ರೀಡೆಯಲ್ಲಿ ಭಾಗವಹಿಸಿದ ಸ್ಥಳೀಯ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದರು.
ಇಂಥ ಗ್ರಾಮೀಣ ಮಟ್ಟದ ಕ್ರೀಡಾಕೂಟ ಗ್ರಾಮದ ಜನರು ಪರಸ್ಪರ ಬೆರೆಯುವುದಕ್ಕೆ ಅನುವು ಮಾಡುವುದರೊಂದಿಗೆ ಗ್ರಾಮದ ಏಳಿಗೆಗೂ ಸಹಕಾರಿಯಾಗಲಿದೆ. ಗ್ರಾಮೀಣ ಕ್ರೀಡಾಕೂಟಗಳು ಕ್ಷೇತ್ರದಾದ್ಯಂತ ನಡೆಯುವಂತಾಗಿ ಗ್ರಾಮೀಣ ಜನತೆಯ ಪ್ರತಿಭೆಯನ್ನು ಹೊರ ತರುವಂತಾಗಲಿ ಎಂದರು. ಕೆಲವು ಗ್ರಾಮೀಣ ಕ್ರೀಡೆಗಳಲ್ಲೂ ಪೊನ್ನಣ್ಣ ಭಾಗವಹಿಸಿ ಗಮನ ಸೆಳೆದರು.