ಎಸ್.ಎಸ್. ಪೊನ್ನಣ್ಣಗೆ ಪೌರ ಸನ್ಮಾನ

21mdk02
Published on

ವಿರಾಜಪೇಟೆ:

ಚುನಾವಣೆ ಮುಗಿದ ನಂತರ ಜನಪ್ರತಿನಿಧಿಗಳು ಜವಾಬ್ದಾರಿ ಅರಿತುಕೊಂಡು ಕೆಲಸ ಮಾಡಬೇಕಾಗುತ್ತದೆ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ವಿರಾಜಪೇಟೆ ಪುರಸಭೆ ವತಿಯಿಂದ ಬುಧವಾರ ಇಲ್ಲಿನ ಪುರಸಭೆ ಆವರಣದಲ್ಲಿ ಏರ್ಪಡಿಸಿದ್ದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಜನರನ್ನು ಮುಟ್ಟುವ ಪ್ರಾಮಾಣಿಕ ಕೆಲಸ ಮಾಡಬೇಕು. ಜನಸಾಮಾನ್ಯರು ಮೆಚ್ಚುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎನ್ನುವುದು ಪ್ರತಿಯೊಬ್ಬ ಜನಪ್ರತಿನಿಧಿಗಳ ಗುರಿ ಆಗಿರುತ್ತದೆ. ಎಲ್ಲಿಯೇ ಆದರೂ ಆಡಳಿತಾಧಿಕಾರಿ ಆಡಳಿತ ಪ್ರಜಾಪ್ರಭುತ್ವಕ್ಕೆ ಮಾರಕ. ವಿರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತಕ್ಕೆ ಸಂಬAಧಿAತೆ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ಘನ ತ್ಯಾಜ್ಯ ನಿರ್ವಹಣೆ ಎಲ್ಲಾ ಕಡೆಯಲ್ಲೂ ದೊಡ್ಡ ಸಮಸ್ಯೆ ಆಗಿದೆ. ರಸ್ತೆ, ಕೆರೆ, ನದಿ ಬದಿಗಳಲ್ಲಿ ಕಸ ಎಸೆಯುವುದು ರಾಷ್ಟ್ರ ದ್ರೋಹಕ್ಕೆÀ ಸಮನಾದ ಕೆಲಸ.

ವಿರಾಜಪೇಟೆ ಪಟ್ಟಣಕ್ಕೆ ಸಂಬAಧಿಸಿದ ಸಮಸ್ಯೆಗಳ ಬಗ್ಗೆ ತನಗೆ ಅರಿವಿದೆ. ಫಲಾನುಭವಿಗಳಿಗೆ ಕೊಡಲು ನಿವೇಶನ ನೀಡಲು ನಿಗದಿಯಾಗಿದ್ದ ಜಾಗಕ್ಕೆ ತೆರಳಲು ರಸ್ತೆ ಮಾಡಲಾಗಿದೆ. ಅಲ್ಲಿದ್ದ ಮರ ಕಡಿದು ಪುರಸಭೆಗೆ ಹಸ್ತಾಂತರ ಮಾಡಲಾಗುವುದು. ಇನ್ನು ಒಂದು ವಾರದೊಳಗೆ ಪುರಸಭೆಗೆ ವ್ಯವಸ್ಥಾಪಕರು ಬರುತ್ತಾರೆ. ಪೌರಕಾರ್ಮಿಕರ ಸಮಸ್ಯೆ ಬಗ್ಗೆ ಹತ್ತಿರದಿಂದ ತನಗೆ ಅರಿವಿದ್ದು, ಇದನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಹಲವು ರೀತಿಯ ಭಾವನಾತ್ಮಕ ಸಂಬAಧ ಹೊಂದಿರುವ ಪುರಸಭೆ ಕಟ್ಟಡದಲ್ಲಿ ತನ್ನನ್ನು ಸನ್ಮಾನಿಸಿರುವುದು ಒಂದು ಸ್ಮರಣೀಯ ಕಾರ್ಯಕ್ರಮ ಎಂದರು.

ವಿಧಾನ ಪರಿಷತ್ತು ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ ಚುನಾವಣೆ ತನಕ ಪಕ್ಷಗಳು ಪ್ರಮುಖವಾಗುತ್ತದೆ. ನಂತರ ಅಭಿವೃದ್ಧಿ ಮುಖ್ಯವಾಗಬೇಕು. ಪುರಸಭೆ ಕಚೇರಿಗೆ ವ್ಯವಸ್ಥೆ ಮಾಡಬೇಕು. ಸುಸಜ್ಜಿತ ಮಾರುಕಟ್ಟೆ ಆಗಬೇಕು. ಮಾರುಕಟ್ಟೆ ಕಾಮಗಾರಿ ಅರ್ಧದಲ್ಲಿ ನಿಂತಿದೆ. ವಿರಾಜಪೇಟೆಯಲ್ಲಿ ಶುಚಿತ್ವಕ್ಕೆ ಆದ್ಯತೆ ಕೊಡಬೇಕು. ಬಡವರಿಗೆ ನಿವೇಶನ ಕೊಡಬೇಕು. ಮುಖ್ಯಮಂತ್ರಿ ಕಾನೂನು ಸಲಹೆಗಾರ ಆಗಿರುವುದರಿಂದ ಹೆಚ್ಚಿನ ಅನುದಾನ ತರುವ ಅವಕಾಶ ಪೊನ್ನಣ್ಣ ಅವರಿಗೆ ಹೆಚ್ಚು ಇದೆ ಎಂದರು.

ಮುಖ್ಯಾಧಿಕಾರಿ ಚಂದ್ರಕುಮಾರ್ ಮಾತನಾಡಿ, ಆರೋಗ್ಯ ನಿರೀಕ್ಷಕ, ಪರಿಸರ ಎಂಜಿನಿಯರ್ ಸೇರಿದಂತೆ ಪ್ರಮುಖ ಹುದ್ದೆಗಳುÀ ಖಾಲಿ ಇದೆ. ಶುಚಿತ್ವ ಉದ್ದೇಶದಿಂದ ಈ ಹುದ್ದೆಗಳು ಪುರಸಭೆಗೆ ಹೆಚ್ಚು ಅಗತ್ಯವಿದೆ. ಇಲ್ಲಿಗೆ ಕಾಯಂ ಎಂಜಿನಿಯರ್ ಬೇಕು ಎಂದು ಶಾಸಕರ ಗಮನ ಸೆಳೆದರು.

ಪುರಸಭೆ ಸದಸ್ಯರಾದ ರಾಜೇಶ್ ಪದ್ಮನಾಭ, ಮತೀನ್, ಮಹಮ್ಮದ್ ರಫಿ, ದೇಚಮ್ಮ ಕಾಳಪ್ಪ ಹಾಗೂ ಸಾರ್ವಜನಿಕರು ಪಟ್ಟಣದ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದು ಆದಷ್ಟು ಬೇಗ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದರು.
ಪುರಸಭೆ ಎಂಜಿನಿಯರ್ ಹೇಮಕುಮಾರ್, ಪುರಸಭೆಯ ಸದಸ್ಯರು, ಸಿಬ್ಬಂದಿ, ಪೌರ ಕಾರ್ಮಿಕರು,
ಡಿಸಿಸಿ ಅಧ್ಯಕ್ಷ ಧರ್ಮಜ ಉತ್ತಪ್ಪ ಮತ್ತಿತರರು ಈ ವೇಳೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net