

ಕಾರ್ಕಳ: ಯಾವುದೇ ದೈವಸ್ಥಾನಗಳಲ್ಲಿ ಕಾರ್ಣಿಕ ಉಳಿಯಬೇಕಾದರೆ ಅನಾದಿ ಕಾಲದಿಂದಲೂ ಪೂರ್ವಜರು ಆರಾಧಿಸಿಕೊಂಡು ಬಂದಿರುವ ಕ್ರಮ ಕಟ್ಟುಕಟ್ಟಲೆ ರೀತಿ ರಿವಾಜುಗಳಿಗೆ ಚ್ಯುತಿಯಾಗದಂತೆ ಕಾಪಾಡಿಕೊಂಡು ಬರಬೇಕಾಗುತ್ತದೆ. ಬದಲಾಗಿ ಮೂಲ ವಿಚಾರ ಮರೆತು ತಮ್ಮ ಆಡಂಬರದ ಪ್ರಚಾರಕ್ಕೆ ಮಾರ್ಪಾಡು ಮಾಡುವುದು ಸರಿಯಲ್ಲ. ದೈವಸ್ಥಾನಗಳು ಭಕ್ತಿ ಶ್ರದ್ಧೆಯ ಕೇಂದ್ರಗಳಾಗಬೇಕು ವಿನಃ ಆಡಂಬರದ ಕೇಂದ್ರವಾಗಬಾರದು ಎಂದು ಡಾ.ರವೀಶ್ ಪಡುಮಲೆ ಹೇಳಿದರು.
ಮುಜಿಲ್ನಾಯ ದೈವಸ್ಥಾನದಲ್ಲಿ ಬೊಳ್ಳೊಟ್ಟು ಬ್ರಹ್ಮ ಮುಜಿಲ್ನಾಯ ದೈವಸ್ಥಾನ ಜೀರ್ಣೋದ್ಧಾರ ಮನವಿ ಪತ್ರ ಬಿಡುಗಡೆ ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಭಾಸ್ಕರ ಎಸ್.ಕೋಟ್ಯಾನ್ ಮಾತನಾಡಿದರು. ಅಧ್ಯಕ್ಷ ವಸಂತ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಡಳಿತ ಮೊಕ್ತೇಸರ ಅಶೋಕ್ ಕುಮಾರ್ ಜೈನ್, ಉದ್ಯಮಿ ಪ್ರೇಮ್ ಕುಮಾರ್, ಅರ್ಚಕ ಕೃಷ್ಣ ತಂತ್ರಿ ಉಪಸ್ಥಿತರಿದ್ದರು. ರಾಜು ಪೂಜಾರಿ ಪ್ರಾರ್ಥಿಸಿ, ಪ್ರಶಾಂತ್ ಚಿತ್ತಾರ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ ಗೌಡ ವಂದಿಸಿದರು.