ಪೋಮ್ಮಕ್ಕಡ ಒಕ್ಕೂಟದಿಂದ ಮಹಿಳಾ ದಿನಾಚರಣೆ

mahila dinacharane
Published on

ಮಡಿಕೇರಿ: ಮಡಿಕೇರಿ ಕೊಡವ ಸಮಾಜದಲ್ಲಿ ಪೋಮ್ಮಕ್ಕಡ ಒಕ್ಕೂಟದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಇತ್ತೀಚೆಗೆ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಂಡ ಕವಿತಾ ಬೊಳ್ಳಪ್ಪರವರು ವಹಿಸಿದ್ದರು. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆ, ಸಾಧಕರಿಗೆ ಸನ್ಮಾನ, ವಿಷಯಗಳ ಮಂಡನೆ ನೆರವೇರಿತು. ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ವಿಧಾನಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉಜಿರೆಯ ಎಸ್.ಡಿ.ಎಂ.ಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಕಾಳೆಯಂಗಡ ಶಲೀಫ್, ಮೈಸೂರು ಯುವರಾಜ ಕಾಲೇಜಿನ ಪ್ರೊಫೆಸರ್ ಡಾ.ತೀತಿರ ರೇಖಾ ವಸಂತ್ ವಿಚಾರ ಮಂಡನೆ ಮಾಡಿದರು.

ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರಾದ ಸಣ್ಣುವಂಡ ಉಷಾ ಅಯ್ಯಣ್ಣ, ಶಿಕ್ಷಕಿ ಚೋಕಿರ ಅನಿತಾದೇವಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಪಾಡಂಡ ಸವಿತಾ ಕೀರ್ತನ್ ಅವರುಗಳನ್ನು ಸನ್ಮಾನಿಸಲಾಯಿತು.

ರಾಷ್ಟ್ರಮಟ್ಟದಲ್ಲಿ ಸಾಧನೆ ತೋರಿದ ಬಾಲಕಿಯರಾದ ಮುಕ್ಕಾಟಿರ ದೇಚಮ್ಮ ಸುಬ್ರಮಣಿ, ಕನ್ನಂಡ ವರ್ಣ ಪೊನ್ನಮ್ಮ, ಅಚ್ಚ ಪಂಡ ಪರ್ಲಿನ್ ಉತ್ತಪ್ಪ, ಚೇನಂಡ ರಕ್ಷಾ ಮುತ್ತಮ್ಮ ಅವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಲಿಯಂಡ ಸರಸ್ವತಿ, ಕಾರ್ಯದರ್ಶಿ ಕೂಪದಿರ ಜೂನಾ ವಿಜಯ, ಖಜಾಂಜಿ ಉಳಿಯಡ ಸಚಿತ ನಂಜಪ್ಪ, ಕೊಡವ ಸಮಾಜ ಉಪಾಧ್ಯಕ್ಷ ಕೇಕಡ ವಿಜು ದೇವಯ್ಯ ಪಾಲ್ಗೊಂಡಿದ್ದರು. ಪಾಲೆಯಡ ಕಾವ್ಯ ಪ್ರಾರ್ಥಿಸಿ, ಮುಕ್ಕಾಟಿರ ಪೊನ್ನಮ್ಮ ಸ್ವಾಗತಿಸಿ, ಚೊಕಿರ ಅನಿತಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net