

ಮಂಡ್ಯ: ಮೈಸೂರಿನ ಇಲವಾಲ ಸಮೀಪದ ಯಲಚಹಳ್ಳಿಯಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಅ.17ರಂದು ದಾಳಿಂಬೆ ಉತ್ಪಾದನೆಯಲ್ಲಿ ವಿನೂತನ ತೋಟಗಾರಿಕಾ ತಂತ್ರಜ್ಞಾನ ಕುರಿತು ರೈತರಿಗೆ ತರಬೇತಿ ಆಯೋಜಿಸಲಾಗಿದೆ.
ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಕೇಂದ್ರ ಹಾಗೂ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮತ್ತು ಅನುಭವಿ ದಾಳಿಂಬೆ ಕೃಷಿಕರು ಮಾಹಿತಿ ನೀಡಲಿದ್ದಾರೆ. ಆಸಕ್ತ ರೈತರು ನೋಂದಣಿಗಾಗಿ ಮೊ.ಸಂ 8147959226 ಅಥವಾ 9341997297 ಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.