ದಾಳಿಂಬೆಗೆ ಸಮತೋಲನ ವಾತಾವರಣ ಅಗತ್ಯ

Hbhalli Fruit Nws
ಹಗರಿಬೊಮ್ಮನಹಳ್ಳಿಯಲ್ಲಿ ದಾಳಿಂಬೆ ಬೆಳೆಗಾರರ ತಾಂತ್ರಿಕ ಸಮಾವೇಶವನ್ನು ಮುನಿರಾಬಾದ್‌ನ ತೋಟಗಾರಿಕಾ ಕಾಲೇಜು ಡೀನ್ ಡಾ.ಎನ್.ತಮ್ಮಯ್ಯ ಉದ್ಘಾಟಿಸಿದರು. ಸಂಘದ ರಾಜ್ಯ ಅಧ್ಯಕ್ಷ ಮುನಿಗೌಡ, ವಿಜ್ಞಾನಿ ಡಾ.ಸುನೀಲ್ ತಮಗಾಳೆ ಇದ್ದರು.
Published on

ಹಗರಿಬೊಮ್ಮನಹಳ್ಳಿ: ದಾಳಿಂಬೆ ಬೆಳೆಗೆ ಅಂತಾರಾಷ್ಟ್ರೀಯ ಬೇಡಿಕೆ ಇರುವುದರಿಂದ ಬೆಳೆಗಾರರ ಸಂಖ್ಯೆ ಹೆಚ್ಚಾಗಬೇಕಿದೆ. ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ದಾಳಿಂಬೆ ಸಹಕಾರಿಯಾಗಲಿದೆ ಎಂದು ವಿಜ್ಞಾನಿ, ತಾಂತ್ರಿಕ ಸಲಹೆಗಾರ ಡಾ.ಸುನೀಲ್ ತಮಗಾಳೆ ಹೇಳಿದರು.

ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿದ್ಯಾರಣ್ಯ ಸಭಾಮಂಟಪದಲ್ಲಿ ದಾಳಿಂಬೆ ಬೆಳೆಗಾರರ ಸಂಘದಿಂದ ಏರ್ಪಡಿಸಿದ್ದ ತಾಂತ್ರಿಕ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ದಾಳಿಂಬೆ ಬೆಳೆಯಲು ಫಲವತ್ತಾದ ಮಣ್ಣು, ನೀರಿನ ನಿರ್ವಹಣೆ ಮತ್ತು ಸಮತೋಲನ ವಾತಾವರಣ ಅಗತ್ಯವಿದೆ. ಬೆಳೆಗೆ ಮಳೆ ಹೆಚ್ಚಾದರೆ ಸಮಸ್ಯೆಯಿಲ್ಲ. ಆದರೆ ನೀರು ನಿಲ್ಲದಂತೆ ನಿಗಾವಹಿಸಬೇಕು. ಗಿಡದಿಂದ ಗಿಡಕ್ಕೆ ನಿಗದಿತ ಅಂತರ.

ಗೊಬ್ಬರ, ಔಷಧ ಸಿಂಪರಣೆ ಮಾಡುವ ವಿಧಾನದ ಅರಿವು, ತೇವಾಂಶ, ಉಷ್ಣಾಂಶ ಹೆಚ್ಚಾದಾಗ ಡ್ರಿಪ್ ತಾಂತ್ರಿಕತೆ ಅಳವಡಿಕೆ ಸೇರಿ ಮುಂಜಾಗ್ರತಾ ಕ್ರಮಗಳನ್ನು ವಹಿಸಿದರೆ ದಾಳಿಂಬೆ ಬೆಳೆಯನ್ನು ನಿರಾಯಾಸವಾಗಿ ಬೆಳೆಯಬಹುದು. ದಾಳಿಂಬೆ ಬೆಳೆಗಾರರ ಹಿತಕ್ಕೆ 2023ರಲ್ಲಿ ಸಂಘ ರಚಿಸಿದ್ದು, ಈಗಾಗಲೇ ರಾಜ್ಯದಲ್ಲಿ 6 ತಾಂತ್ರಿಕ ಸಮಾವೇಶ ನಡೆಸಲಾಗಿದೆ. ದಾಳಿಂಬೆ ಬೆಳೆಗಾರರಿಗೆ ಬೇಸಾಯದ ಕ್ರಮಗಳು ಮತ್ತು ರೋಗ ನಿರ್ವಹಣೆಗಳ ಬಗ್ಗೆ ಜಾಗೃತಿ ಮೂಡಿಸಲು ತರಬೇತಿಗಳು ಅನುಕೂಲವಾಗಿವೆ ಎಂದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಾ.ರಾಜೇಂದ್ರ ಮಾತನಾಡಿದರು. ದಾಳಿಂಬೆ ಬೆಳೆಗಾರರ ಸಂಘದ ಅಧ್ಯಕ್ಷ ಮುನಿಗೌಡ, ಮುನಿರಾಬಾದ್ ಸಂಶೋಧಕ ತಮ್ಮಯ್ಯ, ವಿಜ್ಞಾನಿ ಡಾ.ಮಂಜುನಾಥ, ಸಸ್ಯ ತಜ್ಞ ರಾಘವೇಂದ್ರ ಆಚಾರ್, ಪ್ರಮುಖರಾದ ಶಿವಪ್ರಸಾದ್, ನಾಗರಾಜ, ಪ್ರಗತಿಪರ ರೈತರಾದ ಬಾಚಿಗೊಂಡನಹಳ್ಳಿ ಹೊಳಗುಂದಿ ಶೇಖರಪ್ಪ, ಲಕ್ಷ್ಮೀಶ, ಶಿವಪ್ಪ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಬಿ.ಬಸವನಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net