ಪಾಲಿಟೆಕ್ನಿಕ್​ ಸೌಲಭ್ಯಗಳಿಗಾಗಿ ಎಬಿವಿಪಿ ಮನವಿ

IMG_20251018_205252_698.jpg
Published on

ಹುಬ್ಬಳ್ಳಿ: ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್ ತಾಂತ್ರಿಕ ಕಾಲೇಜು (ಎಸ್.ಜಿ.ಇ.ಎಸ್ ಡಿಫೆನ್ಸ್ ಪಾಲಿಟೆಕ್ನಿಕ್) ಸೌಲಭ್ಯಗಳ ಕೊರತೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಘಟಕವು ಕೂಡಲೇ ವ್ಯವಸ್ಥೆ ಸರಿಪಡಿಸಲು ಮನವಿ ಮಾಡಿದೆ.

ಕಾಲೇಜಿನಲ್ಲಿ ಸುಮಾರು 350 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 4 ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದರೂ ಆಸನಗಳ ಕೊರತೆ, ಶೌಚಾಲಯ ದುರ್ಬಲ ಸ್ಥಿತಿ ಹಾಗೂ ಹಾಸ್ಟೆಲ್ ಸೌಲಭ್ಯಗಳ ಕೊರತೆಯಿಂದ ಶೈಕ್ಷಣಿಕ ಪ್ರಗತಿಯಾಗುತ್ತಿಲ್ಲ ಎಂದು ಪರಿಷತ್ ತಿಳಿಸಿದೆ.

ಬಡ ವಿದ್ಯಾರ್ಥಿಗಳು ಹಾಸ್ಟೆಲ್ ಹಾಗೂ ಮೂಲ ಸೌಲಭ್ಯಗಳ ಕೊರತೆಯಿಂದ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರದಿಂದ ಅಗತ್ಯ ಸೌಲಭ್ಯಗಳು ಲಭ್ಯವಾದಲ್ಲಿ ಶೈಕ್ಷಣಿಕ ಬೆಳವಣಿಗೆಗೆ ದೊಡ್ಡ ನೆರವು ಸಿಗುತ್ತದೆ ಎಂದು ವಿದ್ಯಾರ್ಥಿ ಪರಿಷತ್ ಅಭಿಪ್ರಾಯಪಟ್ಟಿದೆ.

ಪರಿಷತ್ ನಗರ ಕಾರ್ಯದರ್ಶಿ ದಾನೇಶ ಕಿತ್ತೂರ್ ಅವರು, ಕಾಲೇಜಿಗೆ ಅಗತ್ಯ ಸೌಲಭ್ಯಗಳನ್ನು ಶೀಘ್ರದಲ್ಲಿ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

ಎಬಿವಿಪಿ ಧಾರವಾಡ ಜಿಲ್ಲಾ ಸಂಚಾಲಕ ಸಿದ್ಧಾರ್ಥ ಕೋರಿ, ನಗರ ವಿಸ್ತಾರಕ ದರ್ಶನ ಹೆಗಡೆ, ಸುಜನ ಗಂಡೋಲಿ, ಅನಮೋಲ್ ಕಲಬುರಗಿ, ಅಥರ್ವ ಚವ್ಹಾಣ, ಲೋಕೇಶ್ ಚಿಗರೆರ್, ತಿಲಕ, ಪೃಥ್ವಿರಾಜ್, ಕರಣ, ಇಶಿಕಾ ಜೈನ, ಮೇಘನಾ, ಬಸಯ್ಯ, ಶ್ರಾವಣಿ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net