ಮುಂದಿನ ದಿನದಲ್ಲಿ ಮಾಲಿನ್ಯದಿಂದ ಮಾನವ ಜೀವಿಸಲು ಕಷ್ಟ: ಪರಿಸರ ತಜ್ಞೆ ರೇವತಿ ಕಾಮತ್​ ಕಳವಳ

camp
Published on

ಬೆಂಗಳೂರು: ಪರಿಸರ ರಕ್ಷಣೆ ಮಾಡದಿದ್ದರೆ ಮತ್ತು ಮಾಲಿನ್ಯ ತಡೆಗಟ್ಟದಿದ್ದರೆ ಮುಂದಿನ 10 ವರ್ಷಗಳಲ್ಲಿ ಮಾನವ ಜೀವಿಸಲು ಕಷ್ಟಪಡಲು ವಿಷಮ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಪರಿಸರ ತಜ್ಞೆ ರೇವತಿ ಕಾಮತ್​ ಕಳವಳ ವ್ಯಕ್ತಪಡಿಸಿದ್ದಾರೆ.

ವಿಮೂವ್​ ಫೌಂಡೇಶನ್​, ಕಬ್ಬನ್​ ಉದ್ಯಾನ ಬಳಿಯ ಕರ್ನಾಟಕ ರಾಜ್ಯ ಲಾನ್​ ಟೆನಿಸ್​ ಅಸೋಸಿಯೇಷನ್​(ಕೆಎಸ್​ಎಲ್​ಟಿಎ)ನಲ್ಲಿ ಶನಿವಾರ ಆಯೋಜಿಸಲಾಗಿದ್ದ "ಇಂಪ್ಯಾಕ್ಟಾಥಾನ್​' ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಸುಸ್ಥಿರ, ಹಸಿರು ಮತ್ತು ಸ್ವಚ್ಛ ಬೆಂಗಳೂರು ನಿರ್ಮಾಣಕ್ಕೆ ಪರಿಣಾಮಕಾರಿಯಾಗಿ ಕೆಲಸವಾಗಬೇಕಿದೆ. ಮಾಲಿನ್ಯ ತಡೆಗೆ ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕಿದೆ.ಪರಿಸರ ಸಂರಸುವ ಬಗ್ಗೆ ಸರ್ಕಾರ ಗಂಭೀರ ಯೋಜನೆ ಮಾಡಬೇಕಿದೆ. ಗ್ರಾಮೀಣ ಪ್ರದೇಶಗಳನ್ನು ಉಳಿಸುವ ಕೆಲಸವಾಗಬೇಕಿದೆ. ದಿನದಿಂದ ದಿನಕ್ಕೆ ನೀರು,ಗಾಳಿ ಮತ್ತು ಪರಿಸರ ಕಲುಷಿತವಾಗುತ್ತಿದೆ. ಇದನ್ನು ತಡೆಗಟ್ಟುವ ಕೆಲಸವಾಗಬೇಕಿದೆ. ಕೊಳಚೆ ನೀರಿಂದ ಹಾಳಾಗಿರುವ ನದಿ, ಕೆರೆಗಳನ್ನು ಪುನಶ್ಚೇತನ ಮಾಡಬೇಕಿದೆ ಎಂದರು.

"ಸುಸ್ಥಿರ ಗ್ರೇಟರ್​ ಬೆಂಗಳೂರು' ಅಭಿಯಾನ: ಸುಸ್ಥಿರ, ಹಸಿರು ಮತ್ತು ಸ್ವಚ್ಛ ಬೆಂಗಳೂರು ನಿರ್ಮಾಣಕ್ಕೆ ಪ್ರತಿಯೊಬ್ಬರೂ ನೀಡುವ ಸಲಹೆ ಮತ್ತು ಸರ್ವೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. "ಸುಸ್ಥಿರ ಗ್ರೇಟರ್​ ಬೆಂಗಳೂರು' ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು 21 ದಿನ ಅಭಿಯಾನವನ್ನು ಕೈಗೊಂಡಿದ್ದೇವೆ. ಇದಕ್ಕೆ ವಿವಿಧ ಸಂಸ್ಥೆಗಳು, ಪರಿಸರ ತರು ಕೈಜೋಡಿಸಿದ್ದಾರೆ ಎಂದು ವಿಮೂವ್​ ಸಂಸ್ಥಾಪಕ ವಿನಯ್​ ಶಿಂಧೆ ಹೇಳಿದರು.

ಮುಂದಿನ ದಿನಗಳಲ್ಲಿ ಇನ್ನಷ್ಟು ತಾಪಮಾನ ಹೆಚ್ಚಳವಾಗಲಿದೆ.ಇದನ್ನು ತಡೆಯಲು ಮತ್ತು ಮುಂದಿನ ಪೀಳಿಗೆಗೆಸಲುವಾಗಿ ಪರಿಸರವನ್ನು ರಸಬೇಕಿದೆ.ಇದು ಪ್ರತಿಯೊಬ್ಬರ ಕರ್ತವ್ಯವೂ ಹೌದು. ಇಂತಹ ಕಾರ್ಯಗಳಿಗೆ ನಮ್ಮ ಪೋತ್ಸಾಹ ಇರಲಿದೆ.

| ಸಂಯುಕ್ತ ಹೊರನಾಡು, ನಟಿ.

ಅಂತಾರಾಷ್ಟ್ರೀಯ ಮಟ್ಟದ ನಗರವಾಗಿರುವ ಬೆಂಗಳೂರುನ್ನು "ಸುಸ್ಥಿರ ನಗರ' ನಿರ್ಮಾಣ ಮಾಡುವ ಬಗ್ಗೆ ಪ್ರತಿಯೊಬ್ಬರೂ ಧ್ವನಿ ಎತ್ತುವ ಅಗತ್ಯವಿದೆ.ಸಮಾಜಮುಖಿ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಾಲ್ಗೊಳ್ಳಬೇಕು. "ಸುಸ್ಥಿರ ಗ್ರೇಟರ್​ ಬೆಂಗಳೂರು' ಅಭಿಯಾನಕ್ಕೆ ನಮ್ಮ ಇಲಾಖೆಯ ಸಹಕಾರ ಇರಲಿದೆ.

| ಡಿ. ರಂದೀಪ್​, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net