ಯುವ ಸಂಘಟನೆಗಳಿಂದ ಸ್ವಚ್ಛತೆ : ಪಿ.ಬೇಬಿ ಬಾಲಕೃಷ್ಣನ್ ಕರೆ

Published on

ಕಾಸರಗೋಡು: ಯುವ ಸಂಘಟನೆಗಳು ಆಸ್ಪತ್ರೆ, ಬಸ್ ನಿಲ್ದಾಣದಂತಹ ಸಾರ್ವಜನಿಕ ಸ್ಥಳಗಳನ್ನು ಗಮನದಲ್ಲಿಟ್ಟು ಸ್ವಚ್ಛತಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಹೇಳಿದರು.

ಮಾಲಿನ್ಯಮುಕ್ತ ನವಕೇರಳ ಅಭಿಯಾನದ ಅಂಗವಾಗಿ ಜಿಲ್ಲೆಯ ಯುವ ಸಂಘಟನೆಗಳಿಗಾಗಿ ಡಿಪಿಸಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾದ ಸಭೆ ಉದ್ಘಾಟಿಸಿ ಮಾತನಾಡಿದರು.

ಸೆ.10ರೊಳಗೆ ಸ್ವಚ್ಛತಾ ಸಭೆ ಆಯೋಜಿಸುವುದರೊಂದಿಗೆ ಅಕ್ಟೋಬರ್ ವೇಳೆಗೆ ವಾರ್ಡ್‌ಮಟ್ಟದ ಸ್ವಚ್ಛತಾ ಅಭಿಯಾನವನ್ನೂ ಹಮ್ಮಿಕೊಳ್ಳಲಾಗುವುದು. ತ್ಯಾಜ್ಯ ಸಂಸ್ಕರಣಾ ಘಟಕ, ಎಫ್‌ಎಸ್‌ಟಿಪಿ ಸ್ಥಾಪನೆಗೆ ಜನರ ಸಹಕಾರ ಅಗತ್ಯವಿದೆ ಎಂದರು.

ಸ್ಥಳೀಯಾಡಳಿತ ಇಲಾಖೆಯ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನವಕೇರಳ ಕ್ರಿಯಾ ಯೋಜನೆ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣ ವಿಷಯ ಮಂಡಿಸಿದರು. ಸ್ವಚ್ಛತಾ ಮಿಷನ್ ಜಿಲ್ಲಾ ಸಂಯೋಜಕ ಪಿ.ಜಯನ್, ಜಿಲ್ಲಾ ಅಭಿಯಾನ ಸಂಯೋಜಕ ಎಚ್.ಕೃಷ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net